UK Suddi
The news is by your side.

ಬೆಂಗಳೂರು: ಮತ್ತೊಬ್ಬ ಬಿಜೆಪಿ ಕಾರ್ಯಕರ್ತನ ಹತ್ಯೆ

ಬೆಂಗಳೂರು: ಜೆ.ಸಿ. ನಗರದ ಚಿನ್ನಪ್ಪಗಾರ್ಡನ್ನಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಬಿಜೆಪಿ ಕಾರ್ಯಕರ್ತನನ್ನು ಚೂರಿಯಿಂದ ಇರಿದು ಹತ್ಯೆ ಮಾಡಲಾಗಿದೆ. ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಿನ್ನಪ್ಪ ಗಾರ್ಡನ್ ನಿವಾಸಿ ಸಂತೋಷ್ (28) ಕೊಲೆಯಾದ ಕಾರ್ಯಕರ್ತ. ಕಾಪೋರೇಟರ್ ಪುತ್ರ ವಾಸೀಂ (28) ಮತ್ತು ಫಿಲಿಪ್ಸ್ (29) ಎಂಬುವರನ್ನು ಬಂಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದು, ಶೋಧ ಮುಂದುವರಿದಿದೆ. ಬುಧವಾರ ರಾತ್ರಿ 7.15ರ ಸುಮಾರಿಗೆ ಸಂತೋಷ್, ರಾಮಸ್ವಾಮಿಪಾಳ್ಯ ವಾರ್ಡ್ನ ಟೀ ಅಂಗಡಿಗೆ ಬಂದಿದ್ದ. ಈ ವೇಳೆ 2 ಬೈಕ್ಗಳಲ್ಲಿ ಬಂದ ದುಷ್ಕರ್ವಿುಗಳು ಇರಿದು ಪರಾರಿಯಾಗಿದ್ದಾರೆ. ಸಂತೋಷ್ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾನೆ.

ಬಿಜೆಪಿ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದ ಸಂತೋಷ್ಗೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಬೂತ್ ಮಟ್ಟದಲ್ಲಿ ಜವಾಬ್ದಾರಿ ವಹಿಸಲಾಗಿತ್ತು. ಪಕ್ಷದ ಕಾರ್ಯಕ್ರಮಗಳಿಗೆ ಏರಿಯಾದಲ್ಲಿ ಬ್ಯಾನರ್ಗಳನ್ನು ಕಟ್ಟಿದ್ದ. ಈ ವಿಚಾರವಾಗಿ ಸ್ಥಳೀಯವಾಗಿ ಜಗಳವಾಗಿತ್ತು. ಆಲ್ಲದೆ, ಗಾಂಜಾ ವ್ಯಸನಿಗಳಿಗೆ ಸಂತೋಷ್ ಬುದ್ಧಿವಾದ ಹೇಳುತ್ತಿದ್ದ. ಇದೇ ವಿಷಯವಾಗಿ ಕೊಲೆ ಆಗಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಶಂಕಿಸಿದ್ದಾರೆ. ಜೆ.ಸಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments