UK Suddi
The news is by your side.

ಔತಣಕೂಟಕ್ಕೆ ಶ್ರೀರಾಮುಲುವನ್ನು ಆಹ್ವಾನಿಸಿದ ಅಮೆರಿಕಾ ಅಧ್ಯಕ್ಷ ಟ್ರಂಪ್.

ಬಳ್ಳಾರಿ: ವಿಶ್ವದ ದೊಡ್ಡಣ್ಣ, ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಬಳ್ಳಾರಿ ಸಂಸದ ಶ್ರೀರಾಮುಲುರಿಗೆ ಔತಣಕೂಟಕ್ಕೆ ಆಹ್ವಾನ ನೀಡಿದ್ದಾರೆ.

ಇದೇ ಫೆಬ್ರವರಿ 7 ಮತ್ತು 8 ರಂದು ತಮ್ಮ ಆಹ್ವಾನ ಮನ್ನಿಸಿ ಅಮೆರಿಕಾಕ್ಕೆ ಬರುವಂತೆ ಸಂಸದ ಶ್ರೀರಾಮುಲುಗೆ ವಿಶೇಷ ಅಹ್ವಾನ ಬಂದಿದೆ. 
ವಿಶ್ವದ 130 ರಾಷ್ಟ್ರಗಳ ಗಣ್ಯರಿಗೆ ಈ ರೀತಿ ಆಹ್ವಾನ ನೀಡಿರುವ ಟ್ರಂಪ್ ಭಾರತದಿಂದ ಬಳ್ಳಾರಿ ಸಂಸದ ಶ್ರೀರಾಮುಲು ಹಾಗೂ ಮಹಾರಾಷ್ಟ್ರ ಸಿಎಂ ದೇವಿಂದ್ರ ಪಡ್ನವೀಸ್‌‌ ಅವರಿಗೆ ಆಹ್ವಾನ ನೀಡಿರುವುದು ವಿಶೇಷವಾಗಿದೆ. 
ಒಕ್ಕೂಟ ವ್ಯವಸ್ಥೆಯ ರಾಷ್ಟ್ರಗಳ ಗಣ್ಯರಿಗೆ ಪ್ರತಿ ವರ್ಷ ಔತಣಕೂಟ ಹಾಗೂ ಶಾಂತಿ ಸ್ಥಾಪನೆ ಬಗ್ಗೆ ನಡೆಯೋ ಚರ್ಚೆಗೆ ತಮ್ಮನ್ನೂ ಆಹ್ವಾನಿಸಿರುವುದು ನನ್ನ ಪುಣ್ಯವೆಂದು ಶ್ರೀರಾಮುಲು ಹೇಳಿದ್ದಾರೆ.
ಟ್ರಂಪ್ ಆಹ್ವಾನ ಮನ್ನಿಸಿ ಅಮೆರಿಕಾಕ್ಕೆ ಹೋಗಬೇಕಾಗಿದೆ. ಆದ್ರೆ ಕೇಂದ್ರ ಬಜೆಟ್ ನಡೆಯುತ್ತಿರುವುದರಿಂದ ಬಿಜೆಪಿ ಸಂಸದರಿಗೆ ಎಲ್ಲಿಗೂ ಹೋಗದಂತೆ ವಿಪ್ ಜಾರಿಯಾಗಿರುವುದರಿಂದ ತಾವೂ ಪಕ್ಷದ ಹೈಕಮಾಂಡ್‌‌ ಜೊತೆ ಚರ್ಚಿಸಿ ಅಮೆರಿಕಾಕ್ಕೆ ತೆರಳುವ ಬಗ್ಗೆ ತೀರ್ಮಾನ ಕೈಗೊಳ್ಳುವೆ ಎಂದು ಶ್ರೀರಾಮುಲು ಹೇಳಿದ್ದಾರೆ.
ಈಗಾಗಲೇ ಅಮೆರಿಕಾಕ್ಕೆ ತೆರಳಲು ಸಿದ್ಧತೆ ಹಾಗೂ ವೀಸಾ ಸಿದ್ಧಪಡಿಸಿಕೊಂಡಿರುವ ಶ್ರೀರಾಮುಲುಗೆ ಪಕ್ಷದ ನಾಯಕರು ಗ್ರೀನ್ ಸಿಗ್ನಲ್ ನೀಡಿದ್ರೆ ಭಾರತದ ಪರವಾಗಿ ಅವರು ಅಮೆರಿಕಾದ ಅಧ್ಯಕ್ಷರ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ.

ವರದಿ:ಮಂಜುನಾಥ ಅಯ್ಯಸ್ವಾಮಿ.

Comments