UK Suddi
The news is by your side.

ಕನಸುಗಳು

ನಮ್ಮ ಜೀವನದ ಅವಿಭಾಜ್ಯ ಅಂಗ ಕನಸುಗಳು ನಮಗೇ ಅರಿವಿಗೆ ಬಾರದಂತೆ ತಮ್ಮದೇ ಶೈಲಿಯಲ್ಲಿ ದಿನಾಲೂ ಕಾಡುವ ಕನಸುಗಳು. ಕಣ್ಣು ಮುಚ್ಚಿಕೊಂಡು ಮಲಗಿದ್ರೂ ಸಹ ವಿಸ್ಮಯ ಲೋಕ ಕರೆದೊಯುವ ಕನಸುಗಳು. ಕನಸಿಗೆ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು. ವಯಸ್ಸಿನ ಅಂತರ ಇಲ್ಲ.ದೇಶದ ,ಜನಾಂಗೀಯ ಹಂಗಿಲ್ಲ. ಯಾರೂ ಕೂಡ ಕನಸುಗಳು ಕಾಣಬಹುದು. ಕನಸು ಕಾಣಲು ಹೊತ್ತು ಗೊತ್ತು ಏನಿಲ್ಲ. ಕನಸಾಗರರು ಮಲಗಿದ್ರೆ ಸಾಕು. ಜೀವನ ನಡೆಸಲು ಇವುಗಳೂ ಮುಖ್ಯ ಪಾತ್ರ ವಹಿಸುತ್ತವೆ. ಯಾಕೆಂದರೆ ಪ್ರತಿಯೊಂದು ಹಂತದಲ್ಲೂ ಎಲ್ಲವೂ ಸರಿ ಸುಮಾರು ಅಂದುಕೊಂಡಂತೆ ಇರಲೂ ಆಗದು. ಆ ಸಂದರ್ಭದಲ್ಲಿ ಕೊನೆ ಪಕ್ಷ ಕನಸಲ್ಲೂ ತೃಪ್ತಿಯ ಪಡೆಯದೇ ಹೋದರೇ ಬದುಕಿದ್ದೂ ವ್ಯರ್ಥ ಎನಿಸದೆ ಇರದು .

ಕನಸು ವಾಸ್ತವ್ಯದ ಅರಿವು ಮೂಡಿಸುವುದುಯಾವಾಗಲೂ ನಾವು ಹಾಸಿಗೆಯಿಂದ ಎದ್ದಾಗಲೇ ಅಲ್ವಾ. ಹಾಗಂತ ಕನಸುಗಳು ಭಗ್ನ ಮನಸಿನ ಪ್ರತಿರೂಪ ಎಂದೆನಿಲ್ಲ. ಒಳ್ಳೆಯ ಕನಸುಗಳು ನನಸಾಗುವ ನಿಟ್ಟಿನಲ್ಲಿ ಯಾವುದೇ ಕಾರಣದಿಂದ ಹಿಂಜರಿಯದೇ ನನಸಾಗಿಸುವಲ್ಲಿ ಸನ್ನದ್ಧ ಆಗೋಣ. ಆದ್ರೆ ಒಬ್ಬರ ಮೇಲೆ ಪರಿಣಾಮ ಬೀರುವ ಕೆಟ್ಟ ಕನಸು ನನಸು ಮಾಡುವದು ಬೇಡವೆ ಬೇಡ.ಒಂದು ಕನಸು ನನಸು ಮಾಡಲು ಯತ್ನಿಸುತ್ತಿದ್ದಾರೆಯೋ, ಇಲ್ಲವೇ??ಎಂಬುವದು ಮುಖ್ಯ.ಜೀವನ ಪರ್ಯಂತ ಕನಸು ಕಾಣುವ ಬದಲು ಕಂಡ ಕನಸಿನ ಮಾತು ನಿಜ ಜೀವನದಲ್ಲಿ ಮಹತ್ವದ ಪಾತ್ರವನ್ನು ಕೊಡಲೇ ಬೇಕು.ಇಲ್ಲದೆ ಹೋದರೆ ಅದು ತಿರುಕನ ಕನಸು ಎಂದಾಗುತ್ತದೆ. ಏನೇ ಆದರೂ ಕನಸು ಕಂಡಿದ್ದ ನಾವೆಲ್ಲರೂ ಒಮ್ಮೆಯಾದ್ರು ಅಂಜಿದ ,ಗಾಬರಿ ಬಿದ್ದು ಎದ್ದ ಕೂಡಲೇ ನೀರು ಕುಡಿದು ಬೆವರು ಒರೆಸಿಕೊಂಡಿದ್ದು ಇದೆ ಎಂಬುದು ನಮ್ಮ ಅನುಭವದ ಮಾತು. ಅದೇ ರೀತಿಯಲ್ಲಿ ಕನಸು ಕಾಣುವ ಸಂದರ್ಭದಲ್ಲಿ ನಕ್ಕು, ಮುಗಳ್ನಕ್ಕು ಕೆಲವೊಮ್ಮೆ ಮಾತಾಡುತ್ತಾ ಇದ್ದೆವು ಕನಸಲ್ಲಿ ಎಂದು ಇದ್ರೆ,ಅದೇ ಸಮಯದಲ್ಲಿ ಮಾತು ಕೂಡ ಆಡ್ತೀವಿ ಅಲ್ವಾ???ಇದೆ ಈ ಕನಸಿನ ತಾಕತ್ತು.

ಕೆಲವು ಮಕ್ಕಳಲ್ಲಿ ನೋಡುತ್ತೇವೆ ಕನಸಲ್ಲಿ ಗೆಳೆಯರು ಹೊಡೆದಂತೆ, ಶಿಕ್ಷಕರು ಹೊಡೆದಹಾಗೆ ಕನಸು ಕಂಡು ಹಾಸಿಗೆ ಒದ್ದೆ ಮಾಡಿಕೊಳ್ಳುವ ಸಂದರ್ಭ ಇರುತ್ತದೆ.ಏನೇ ಇರಲಿ ಕನಸಿನಲ್ಲಿ ಬಂದು ಇಷ್ಟು ಹತ್ತಿರ ಬಂದು ಅವನ ಅಪ್ಪಿಕೊಂಡ ಚಲನ ಚಿತ್ರ ತಾರೆ ಅಥವಾ ಅವನ ಕನಸಿನ ರಾಣಿ ಜೊತೆಗೆ ಸಂಗೀತದ ನಿನಾದ ಅದರಲ್ಲಿ ಯುವಕ ಯುವತಿಯರು ಕಾಣುವ ಪರಿಯು ಅತ್ಯಂತ ಪ್ರಭಾವಕಾರಿ.ಅಷ್ಟೇ ಅಲ್ಲದೆ ಮನೆ ಕಟ್ಟುವ ಸೈಟು ಹೇಗಿರಬೇಕು ಯಾವ ರೀತಿಯಲ್ಲಿ ನೋಡಿದವರಿಗೆ ಬಿಲ್ಡಿಂಗ್ ಕಾಣಿಸಬೇಕು???ಯಾವ ಯಾವ ತರ ಇರಬೇಕು ಎಂಬುದು ಕೂಡ ಏಷ್ಟೋ ಬಾಡಿಗೆ ಮನೆಯಲ್ಲಿ ವರ್ಷಪೂರ್ತಿ ವಾಸ ಮಾಡುವ ಬಾಡಿಗೆ ದಾರರ ಕನಸು.ಗೃಹಿಣಿಗೆ ಅವಳದೇ ಕನಸು ಕಾಣಲು ಸಾಧ್ಯ. ಹೇಗೆ ಪ್ರಭಾವ ಬೀರಬಹುದು?ಹೇಗೆ ಬಟ್ಟೆಗಳನ್ನು ಧರಿಸಿ ಓಡಾಡಬಹುದು,ಹೇಗೆ ಒಡ ವೇ ಹಾಗೂ ಆಭರಣ ತೊಗೋಬೇಕು ಎಂಬೆಲ್ಲ ಕನಸು ಕಾಣುವ ಪೃವೃತಿ. ಅಜ್ಜ ಅಜ್ಜಿ ಗಳಿಗೆ ಮೊಮ್ಮಕ್ಕಳ ಏಳಿಗೆಯ ಕನಸುಗಳು.ಹೀಗೇ ಮುಂದುವರಿದರೆ ಅದೇ ರೀತಿಯಲ್ಲಿ ಪಟ್ಟಿ ಮಾಡಿ ಅದನ್ನು ಮುಂದುವರಿಸಲು ಲೇಖನ ಸಾಕಗಲ್ಲ.
ಒಟ್ಟಾರೆ ಹೇಳುವುದಾದರೆ ಕನಸು ಕಾಣುವ ಹಾಗೆ ಮಾಡಿ ಅದನ್ನು ಬೇರೆಯವರಿಗೂ ಮಾರ್ಗದರ್ಶನ ನೀಡುವ ಮೂಲಕ ನಾವು ಮತ್ತೊಬ್ಬರಿಗೆ ಮಾದರಿಯನ್ನು ಅನುಸರಿಸಲು ಒಂದು ಸಣ್ಣ ಉದಾಹರಣೆ ಆಗಬೇಕು.
ಹುಟ್ಟಿದ ಮೇಲೆ ಸಾವಿನ ತನಕವೂ ಕನಸುಗಳು ನಮ್ಮಿಂದ ಯಾವತ್ತೂ ಅಗಳಲ್ಲ ಎಂಬುದನ್ನು ಗಮನಿಸಬೇಕು.

ಮಗು ಹುಟ್ಟಿದ ಘಳಿಗೆಯಿಂದ ತಾಯಿಯ ಕನಸು ಕಾಣಲು ಸಾಧ್ಯ ಎಂಬುದನ್ನು ಮರೆಯಬಾರದು. ಯಾಕೆಂದರೆ ಅದರ ಪ್ರತಿ ಕ್ಷಣವೂ ಅವಳು ನಗುವಾಗ ಜೊತೆಗೆ ಇದ್ದುದರಿಂದ, ತಾನೇ ತಾನಾಗಿ ತನ್ನ ಮಗುವಿನ ಬೆಳವಣಿಗೆ ಮತ್ತು ಅದರ ಜೊತೆಗೆ ಒಳ್ಳೆಯ ಭವಿಷ್ಯದ ದೃಷ್ಟಿಯಿಂದ ಆನೇಕ ಕನಸುಗಳು ಕಟ್ಟಿಕೊಳ್ಳುವಲ್ಲಿ ಲೀನ ಆಗ್ತಾಳೆ.ಜೀವನದಲ್ಲಿ ಮಹತ್ವದ ಪಾತ್ರವನ್ನ ಕನಸು ಆಕ್ರಮಿಸಿದೆ.

ಏಷ್ಟೋ ಕನಸುಗಳು ಆನೇಕ ದೈಹಿಕ ಬದಲಾವಣೆ ತರುತ್ತವೆ. ನಗು,ನೋವು, ಹತಾಶೆಯ ಭಾವ, ಬೇಸರದ ಸಂಗತಿ ಎಲ್ಲವು ಕೂಡ ಕನಸಲ್ಲೂ ಕಾಣುತ್ತಾ ಹೊರಗೆ ನೋಡುವವರಿಗೂ ಗೋಚರಿಸುತ್ತದೆ.

ಕನಸಲ್ಲು ಸಹ ವಿಸ್ಮಯ ಲೋಕ ಕಾಣುವ ಹಾಗೆ ಅನೇಕರು ಕವಿತೆ ಮತ್ತು ಚುಟುಕು ಸಾಹಿತ್ಯ ಮೂಲಕ ತಮ್ಮ ಸ್ವಂತ ಕವಿತೆಗಳನ್ನು ಬರೆದು ಪ್ರೇಮ ನಿವೇದನೆ ಮಾಡುವುದನ್ನು ನೋವು ಮತ್ತು ವಿರಹ ಗೀತೆಗಳು ಎಲ್ಲವು ಸೃಷ್ಠಿ ಮಾಡಿರುವರು.

ಒಂದರ್ಥದಲ್ಲಿ ಮನಸಿನ ಅದ್ಭುತ ಲೋಕವೇ ಸೂಕ್ಷ್ಮವಾಗಿ ಗಮನಿಸಿದಾಗ ಕನಸುಗಳಗಿ ಹೊರ ಜಗತ್ತಿಗೆ ಬರುತ್ತವೆ. ಒಳ್ಳೆಯ ಸಮಾಜದ ಏಳಿಗೆ ಮಾಡುವುದು ಒಂದು ದೊಡ್ಡ ಪ್ರಮಾಣದ ಕನಸು.

ಕನಸಿಗೆ ಅದರದ್ದೇ ಆದ ಒಂದು ದೊಡ್ಡ ಪ್ರಮಾಣದ ವ್ಯಾಪ್ತಿಯಲ್ಲಿ ಬರುವ ಮನಮೋಹಕ ದೃಶ್ಯ ಇವೆ ಎಂಬುದನ್ನು ಗಮನಿಸಬೇಕು.
ಮಹಾ ವೈರಾಗ್ಯದ ನಿಧಿ ಅಕ್ಕ ಮಹಾದೇವಿ ಕೂಡ ಕನಸಲ್ಲಿ 

ಕೇಳವ್ವಾ ಕೇಳವ್ವಾ ಕೆಳದಿ ನಾನೊಂದು ಕನಸುವ ಕಂಡೆ.
ಗಿರಿಯಮೇಲೊಬ್ಬ ಗೊರವ ಕುಳ್ಳಿರ್ದುದ ಕಂಡೆ
ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು
ಬಂದೆನ್ನ ನೆರೆದ ನೋಡವ್ವಾ
ಆತನನಪ್ಪಿಕೊಂಡು ತಳವೆಳಗಾದೆನು.
ಚೆನ್ನಮಲ್ಲಿಕಾರ್ಜುನನ ಕಂಡು ಕಣ್ಣು ಮುಚ್ಚಿ ತೆರೆದು ತಳವೆಳಗಾದೆನು

ಎಂದು ಅದ್ಭುತವಾದುದನ್ನು ಮಹತ್ತರವಾದ ಕನಸುಗಳು ಕಂಡಿದ್ದು ಕಾಣುತ್ತೇವೆ.

ನನ್ನ ಜೊತೆ ನಿಜಕ್ಕೂ ನೀವೂ ವಿಸ್ಮಯ ನಗರಿಯಲ್ಲಿ ಬಂದ್ರಿ ಅಲ್ವಾ.ಅದೇ ಕನಸಿನ ಲೋಕಾ.
-ಕವಿತಾ ಮಳಗಿ

Comments