UK Suddi
The news is by your side.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಂತಹ ಗಾಂಧೀಜಿಯವರ ಸಮುದಾಯ ನಮ್ಮದು.ಎಲ್ಲಾ ಸಮುದಾಯಕ್ಕೆ ಭಾಗ್ಯ ನೀಡುತ್ತಿರುವ ರಾಜ್ಯ ಸರ್ಕಾರ, ನಮ್ಮ ಸಮುದಾಕ್ಕೂ ಭಾಗ್ಯ ನೀಡಿಬೇಕು:ಡಾ. ಟಿ ಎ ಶರವಣ.

ಹೊಸಪೇಟೆ:ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಂತಹ ಗಾಂಧೀಜಿಯವರ ಸಮುದಾಯ ನಮ್ಮದು.ಆದರೆ ಇಂತಹ ನಮ್ಮ ಸಮುದಾಯಕ್ಕೆ ಸ್ವಾತಂತ್ರ್ಯ ಇಲ್ಲವಾಗಿದೆ.ಎಲ್ಲಾ ಸಮುದಾಯಕ್ಕೆ ಭಾಗ್ಯ ನೀಡುತ್ತಿರುವ ರಾಜ್ಯ ಸರ್ಕಾರ, ನಮ್ಮ ಸಮುದಾಕ್ಕೂ ಭಾಗ್ಯ ನೀಡಿಬೇಕು. ನಾವು ಗಾಂಧಿವಾದಿಗಳು. ಮುಂದೆ ನಮ್ಮ ಮೀಸಲಾತಿ ಹೋರಾಟಕ್ಕೆ ನ್ಯಾಯ ಸಿಗದಿದ್ದರೆ ಮುಂದಿನ ದಿನಗಳಲ್ಲಿ ದಂಡಂ ದಶಗುಣಂ ಎಂದು ವಿಧಾನ ಪರಿಷತ್ ಸದಸ್ಯ ಡಾ.ಟಿ.ಎ.ಶರವಣ ಎಚ್ಚರಿಸಿದರು.

ಮೀಸಲಾತಿ ಹಾಗೂ ಅಭಿವೃದ್ಧಿ ನಿಗಮ ರಚನೆಯನ್ನು ಒತ್ತಾಯಿಸಿ ರಾಜ್ಯ ಆರ್ಯವೈಶ್ಯ ಮಹಾಮಂಡಳಿ ಹಾಗೂ ಯುವಜನ ಮಹಾಸಭೆ ಸಹಯೋಗದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ.18ರಂದು ನಡೆಯುವ ನಮ್ಮ ನಡೆ ಸಮಾಜದ ಕಡೆ ರಾಜ್ಯ ಮಟ್ಟದ ಬೃಹತ್ ಜಾಗೃತಿ ಸಮಾವೇಶದ ನಿಮಿತ್ತ ಹಂಪಿಯಿಂದ ಶುಕ್ರವಾರ ಆರಂಭವಾದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಜನಾಂಗದಲ್ಲಿಯು ಬಡತನ ಇದೇ.ವ್ಯಾಪಾರ ಮಾಡುತ್ತಿದ್ದಾರೆ ನಿಜ. ಆದರೆ ಎಂಥ ವ್ಯಾಪಾರ ಮಾಡುತ್ತಿದ್ದಾರೆ ಎಂಬುದು ಮುಖ್ಯ. ಅದರಿಂದ ಎಷ್ಟು ಲಾಭ ಬರುತ್ತಿದೆ ಎಂಬುದು ಸರ್ವೇ ಮಾಡಬೇಕಿದೆ. ನಮ್ಮ ಮೂಲ ವೃತ್ತಿ ವ್ಯಾಪಾರ ನಾವು ವ್ಯಾಪಾರ ಮಾಡಿ ಪ್ರಾಮಾಣಿಕವಾಗಿ ತೆರಿಗೆಯನ್ನು ಕಟ್ಟುತ್ತಿದ್ದೆವೆ. ರಾಜರಿಗೂ ಸಾಲ ನೀಡಿದ ಸಮಾಜ ನಮ್ಮದಾಗಿದೆ. ಆದರೆ ಸಮಾಜದ ಈಗಿನ ಪರಿಸ್ಥಿತಿ ಎಂಥದ್ದು ಎಂಬುದನ್ನು ತಿಳಿಯಬೇಕಿದೆ. ನಮ್ಮನು ಕಡೆಗಣಿಸುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮಲ್ಲಿ ಒಗ್ಗಟ್ಟಿಲ್ಲದೆ ಇರುವುದು, ನಮ್ಮ ಕಾಲು ನಾವೇ ಎಳೆದುಕೊಳ್ಳುತ್ತಿದ್ದೇವೆ ಎಂದರು.


ತೆಲಂಗಾಣ ಆಂಧ್ರ ರಾಜ್ಯಗಳಲ್ಲಿ ಈಗಾಗಲೇ ಮೀಸಲಾತಿಯನ್ನು ಪಡೆಯುತ್ತಿದ್ದಾರೆ.ಆದರೆ ನಮ್ಮ ರಾಜ್ಯದಲ್ಲಿ ಈವರೆಗೆ ಮೀಸಲಾತಿಯನ್ನು ಪಡೆದುಕೊಳ್ಳುವ ಅಲ್ಲಿ ನಾವು ವಿಫಲರಾಗಿದ್ದೇವೆ. ನಮ್ಮ ಸಮಾಜಕ್ಕೆ ಒಂದು ನಿಗಮ ಮಾಡಬೇಕಿದೆ. 1958ರಲ್ಲಿ ಸಮಾಜಕ್ಕೆ ಎರಡು ಗುಂಪುಗಳಾಗಿ ವಿಂಗಡಿಸಿ ಮೀಸಲಾತಿ ನೀಡಲಾಗಿತ್ತು. ಅಧಿಕಾರಿಗಳ ದೋಷದಿಂದಾಗಿ ಮೀಸಲಾತಿ ಕಳೆದಂತಾಯಿತು ಎಂದರು.

ಕೊಪ್ಪಳ ಜಿಲ್ಲೆಯ ಗುನ್ನಾಳದ ಅಂಗವಿಕಲ ವೆಂಕಟೇಶ್ ಪಾದಯಾತ್ರೆಯಲ್ಲಿ ಭಾಗವಹಿಸಿ ಗಮನ ಸೇಳೆದರು.


ಯುವ ಸೇನೆಯ ರಾಜ್ಯಾಧ್ಯಕ್ಷ ಜೆ.ಬಿ.ಕೋಟ್ರೇಶ್ವರ್, ಮುಖಂಡರಾದ ಬಿ.ವಿ.ಸತ್ಯನಾರಾಯಣ್, ಭೋಪಾಳ್ ರಾಘವೇಂದ್ರ ಶೆಟ್ಟಿ, ನರಸಿಂಹ ಮೂರ್ತಿ, ರಾಮಪ್ರಸಾದ್, ರಮೇಶ್‍ಗುಪ್ತ, ರಾದಕೃಷ್ಣ, ದರೋಜಿ ನಾಗರಾಜ್, ಹರೀಶ್ ಭಳಗನೂರ್, ರವಿಂದ್ರ ಇಲ್ಲೂರ್, ಪ್ರವೀಣ್‍ಕುಮಾರ್ ಜೂಟ್ಟೂರ್, ಜೂಟ್ಟರು ರಾಘವೆಂದ್ರ, ಶ್ರೀನಿವಾಸ್ ವಕೀಲೆ ಜೆ.ತ್ರಿವೇಣಿ ಇತರರಿದ್ದರು.

ವರದಿ:ಮಂಜುನಾಥ ಅಯ್ಯಸ್ವಾಮಿ

Comments