UK Suddi
The news is by your side.

ವಿಜಯಪುರ: ಫೆ.3 ರಂದು ಯಲಗೂರೇಶ್ವರ ಕಾರ್ತಿಕೋತ್ಸವ

ವಿಜಯಪುರ: ಜಿಲ್ಲೆಯ ಯಲಗೂರ ಕ್ಷೇತ್ರದ ಯಲಗೂರೇಶನ ಕಾರ್ತಿಕೋತ್ಸವವು ಫೆ.3 ರಂದು ಜರುಗಲಿದೆ.

ಅಂದು ಬೆಳಗ್ಗೆ ಪಂಚಾಮೃತ ಅಭಿಷೇಕ ಪವಮಾನ ಹೋಮ, ಮಹಾಪೂಜೆ, 10 ಗಂಟೆಗೆ ತರಬಂಧಿ ಸ್ಪರ್ಧೆ, ತೀರ್ಥ ಪ್ರಸಾದ, ರಾತ್ರಿ ಕಾರ್ತಿಕೋತ್ಸವ ನಡೆಯಲಿದೆ. ಬೀದರ ಮಾಣಿಕ್ಯನಗರ ಸಂಸ್ಕೃತ ವಿದ್ಯಾಪೀಠ ವಿದ್ಯಾರ್ಥಿಗಳಿಂದ ವೇದಘೊಷ, ಪಂ. ಪ್ರಸನ್ನಾಚಾರ್ಯ ಕಟ್ಟಿ ಇವರಿಂದ ಹರಿವಾಯುಸ್ತುತಿ, ಸುಂದರಕಾಂಡ, ಸಮದ್ವಿಜಯ ಪಾರಾಯಣ, ಭವ್ಯ ಶೋಭಾ ಯಾತ್ರೆ ನಡೆಯಲಿದೆ.

ನಂತರ ಪದ್ಮಶ್ರೀ ಜೋಷಿ, ರಘೂತ್ತಮ ಜೋಷಿ, ಸಂಗೀತಾ ಕಾಖಂಡಕಿ, ನಾಗರಾಜ ಕುಲಕರ್ಣಿ, ಲಾವಣ್ಯ, ಸ್ನೇಹಾ ಮತ್ತು ಪ್ರೇಮಾ ಕಡಿವಾಲ, ಸುಸ್ವರ ಬಳಗ, ಜಿ.ಬಿ. ಕುಲಕರ್ಣಿ ಸಮೂಹ ದಾಸವಾಣಿ ನಡೆಯಲಿದೆ.

ಫೆ.4 ರಂದು ಹರಶಾವಿಗೆ (ದಾಸೋಹ) ಮತ್ತು ನಿರಂತರ ದಾಸವಾಣಿ, ಬೆಳಗ್ಗೆ 10 ಗಂಟೆಗೆ ಶ್ವಾನಗಳ ಓಟದ ಸ್ಪರ್ಧೆ ಜರುಗುವುದು. ನಂತರ ಸುಜಾತ ಗುರವ, ರವೀಂದ್ರ ಯಾವಗಲ್, ಕಿರಣ ಯಾವಾಗಲ್, ನಯನ ಯಾವಗಲ್, ಗಣೇಶ ಹೆಗಡೆ, ಸಂಗೀತಾ ಕಟ್ಟಿ ಕುಲಕರ್ಣಿ ಇವರಿಂದ ಸಂಗೀತ ಕಾರ್ಯಕ್ರಮ ಸಂಜೆ ರಥೋತ್ಸವ ಅದ್ದೂರಿಯಾಗಿ ನಡೆಯಲಿದೆ. ರಾತ್ರಿ 8 ಗಂಟೆಗೆ ಹೊಂಡಪೂಜೆ, ಪಲ್ಲಕ್ಕಿ ಸೇವೆ ನಡೆಯಲಿದೆ. ನಂತರ ಜಗಮೆಚ್ಚಿದ ಮಗ ನಾಟಕ ಪ್ರದರ್ಶನ ನಡೆಯಲಿದೆ.

ಫೆ.5 ರಂದು ಬೆಳಗ್ಗೆ 9 ಗಂಟೆಗೆ ಸಂಗ್ರಾಣಿ ಕಲ್ಲು, ಸಿಡಿಗಲ್ಲು ಎತ್ತುವುದು, ತೆಕ್ಕೆ ಬಡಿದು ಚೀಲ ಎತ್ತುವುದು, ಉಸಕಿನ ಚೀಲ ಹಾಗೂ ಸಂಜೆ 4 ಗಂಟೆಗೆ ಜಂಗಿ ಕುಸ್ತಿಗಳು ಜರುಗುವವು ಎಂದು ಯಲಗೂರೇಶ ದೇವಸ್ಥಾನ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

Comments