UK Suddi
The news is by your side.

ಅಗ್ನಿ ಅವಘಡಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯದ ಹತ್ತಿ ನಾಶ.

ಕಂಪ್ಲಿ:ಅಗ್ನಿ ಅವಘಡಕ್ಕೆ ತುತ್ತಾಗಿ ರೂ.15 ಲಕ್ಷ ಮೌಲ್ಯದ ಹತ್ತಿ ನಾಶವಾದ ಘಟನೆ ನಡೆದಿದೆ.
ಕಂಪ್ಲಿ ತಾಲೂಕಿನ ಕೋಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿಜಯನಗರ ಕ್ಯಾಂಪಿನಲ್ಲಿ ಅಗ್ನಿ ಅವಘಡ ಇಂದು ಮದ್ಯಾಹ್ನ ಸುಮಾರು 1 ಗಂಟೆಗೆ ಸಂಭವಿಸಿದೆ.

ಕೃಷಿಕ ಕೋಟೇಶ್ವರ ರಾವ್ ಎನ್ನುವರಿಗೆ ಸೇರಿದ ಹತ್ತಿ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ ಈ ಘಟನೆಗೆ ಕಾರಣಗಳು ತಿಳಿದು ಬಂದಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೋಳೂರು ಗ್ರಾಮ ಪಂಚಾಯ್ತಿ ಸದಸ್ಯ ನಾಗರಾಜ್ ಅವರು ಕೂಡಲೇ ಸ್ಥಳೀಯ ಶಾಸಕ ಟಿಎಚ್ ಸುರೇಶ್ ಬಾಬು ಅವರ ಗಮನಕ್ಕೆ ತಂದಿದ್ದಾರೆ. ಶಾಸಕ ಸುರೇಶ್ ಬಾಬು ತಹಶೀಲ್ದಾರರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ಜೊತೆ ಮಾತನಾಡಿ ರೈತ ಕೋಟೇಶ್ವರ ರಾವ್ ಅವರ ಹತ್ತಿ ಅವಘಡಕ್ಕೆ ತುತ್ತಾಗಿದ್ದು, ತಕ್ಷಣವೇ ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ.

Comments