UK Suddi
The news is by your side.

‘ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್’ ಮೈಲಾರ ಕಾರಣಿಕ

ಬಳ್ಳಾರಿ : ಜಿಲ್ಲೆಯ ಐತಿಹಾಸಿಕ ಸುಕ್ಷೇತ್ರ ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವ ನುಡಿ ಹೊರಬಿದ್ದಿದೆ. ಈ ಬಾರಿಯ ಕಾರಣಿಕದಂತೆ ರಾಜ್ಯದ ರೈತರ ಮೊಗದಲ್ಲಿ ಮಂದಹಾಸ ಮೂಡುವ ನಿರೀಕ್ಷೆಯಿದ್ದರೆ, ರಾಜಕೀಯದಲ್ಲಿ ಬಹದೊಡ್ಡ ತಲ್ಲಣ ಸೃಷ್ಟಿಯಾಗಲಿದೆಯಂತೆ.

ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ‘ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್’ ಎಂದು ಕಾರ್ಣಿಕ ನುಡಿದ ಗೊರವಯ್ಯ ವೆಂಕಪ್ಪ ಒಡೆಯರ್‌ ಅವರ ಈ ವರ್ಷದ ಭವಿಷ್ಯವಾಣಿ ನುಡಿದಿದ್ದಾರೆ.

ಕಾರ್ಣಿಕೊತ್ಸವದಂತೆ ಅನ್ನದಾತರಿಗೆ ಪ್ರಸಕ್ತ ವರ್ಷ ಮಳೆ ಬೆಳೆ ಸಮೃದ್ಧಿಯಾಗಿ ಬರಲಿದೆ. ನದಿ ಹಳ್ಳ, ಕೊಳ್ಳ ತುಂಬಿ ಹರಿದು ರೈತರ ಮೊಗದಲ್ಲಿ ಮಂದಹಾಸ ಮೂಡತ್ತದೆಯಂತೆ. ಅಲ್ಲದೆ, ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗಲಿದ್ದು, ಅತ್ಯುನ್ನತ ಹಿರಿಯ ಪ್ರಭಾವಿ ನಾಯಕರಿಗೆ ಸಂಕಷ್ಟ ಬರಲಿದೆಯಂತೆ.

ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ‌ ಗೊರವಪ್ಪ ಬಿಲ್ಲನ್ನೇರಿ ಕಾರ್ಣಿಕ ನುಡಿದ ಗೊರವಪ್ಪ, ಎಲ್ಲಾ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲೋದು ಸುಲಭವಲ್ಲ,ಪೂರ್ವ ನಿಯೋಜಿತ ಯೋಜನೆ ಮಾಡಬೇಕು,ಎಲ್ಲಾ ಪಕ್ಷಗಳ ನಾಯಕರು ಕಣ್ಣೀರು ಸುರಿಸಿ ಅಧಿಕಾರಕ್ಕೆ ಗದ್ದುಗೆ ಎರಬೆಕಿದೆ ಎಂದು ವಿಶ್ಲೇಷಿರುವ ಗೊರವಪ್ಪನ ಹೇಳಿಕೆ ರಾಜಕೀಯ ಕುರಿತು ಭವಿಷ್ಯ ನುಡಿದಿದ್ದು ವಿಶೇಷವೆನಿಸಿದೆ. ಇಂಧನ‌ ಸಚಿವ ಡಿ.ಕೆ. ಶಿವಕುಮಾರ್‌ ಸೇರಿದಂತೆ ಹಲವಾರು ರಾಜಕಾರಣಿಗಳು ಕಾರ್ಣಿಕ ಆಲಿಸಿದ್ದಾರೆ.

Comments