UK Suddi
The news is by your side.

ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳೇ ಕಾಣದಂತಾಗಿವೆ.ನಾವಿಬ್ಬರು ನಮಗಿಬ್ಬರು.ಇಲ್ಲವೆಂದರೆ ನಾನೊಂದು ತೀರ ನೀನೊಂದು ತೀರ ಎಂಬ ಕಾಲಘಟ್ಟಕ್ಕೆ ಬಂದಿದ್ದೇವೆ:ಸಿದ್ದರಾಮ ಕಲ್ಮಠ

ಹೊಸಪೇಟೆ:ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳೇ ಕಾಣದಂತಾಗಿವೆ.ನಾವಿಬ್ಬರು ನಮಗಿಬ್ಬರು.ಇಲ್ಲವೆಂದರೆ ನಾನೊಂದು ತೀರ ನೀನೊಂದು ತೀರ ಎಂಬ ಕಾಲಘಟ್ಟಕ್ಕೆ ಬಂದಿದ್ದೇವೆ ಎಂದು ಬಳ್ಳಾರಿಯ ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಹೇಳಿದರು.

ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕೋತ್ಸವದ ನಿಮಿತ್ತ ತಾಲೂಕಿನ ಕಮಲಾಪುರದ ಸರ್ಕಾರಿ ಪ.ಪೂ.ಕಾಲೇಜ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಸಂಯುಕ್ತಾಶ್ರಯದಲ್ಲಿ ಕಾಲೇಜ್‍ನ ಆವರಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಮಾರೋಪ ಹಾಗೂ ಕಥಸಂಕಲನಗಳ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. 

ಯಾವುದೇ ಕಥೆಯಾದರೂ ನಮ್ಮ ಭಾವಗಳ ತಕ್ಕಂತೆ ಇರುತ್ತವೆ. ಕತೆಗಾರನ ದೃಷ್ಟಿಯ ತಕ್ಕಂತೆ ಕಥೆಗಳನ್ನು ನಮ್ಮ ಬದುಕು, ಸಮಸ್ಯೆ, ಸಂಘರ್ಷಗಳು ಇವೆಲ್ಲ ಮೀರಿ ಮಾನವೀಯತೆಯ ಕಥೆಗಳನ್ನು ಒದಬೇಕು. ಯಾವುದೇ ಸಿನಿಮಾ ನಾಟಕ ಅದ್ಭುತವಾಗಿ ಮೂಡಿ ಬಂದರೆ, ಅದರ ಹಿನ್ನೆಲೆ ಕಥೆಯ ಕತೆಗಾರನ ಕೈಚಳಕ ಮೂಡಿ ಬಂದಿರುತ್ತದೆ. ಕಥೆ ಹೇಳುವವರು, ಕೇಳುವವರಿಗೆ ಸಮಯ ಇಲ್ಲದಂತ ಕಾಲಘಟ್ಟಕ್ಕೆ ಬಂದಿದ್ದೇವೆ. ದೇಶಿ ಕಥೆಗಳು ಅತ್ಯುತ್ತಮವಾಗಿ ಕೆಲ ಪಾತ್ರಗಳು ಕಣ್ಮುಂದೆ  ಬರುತ್ತವೆ. ಕತೆಗಳಿಗೆ ತಕ್ಕಂತೆ ಪಾತ್ರವನ್ನು ಅನುಭವಿಸುತ್ತೇವೆ. ಜಾತಿ ಅಸ್ಪೃಶ್ಯತೆ ಕಂದಾಚಾರ ಬಿಟ್ಟು ವೈಚಾರಿಕ ಕಥೆಗಳನ್ನು ಓದಬೇಕು. ವಿದ್ಯಾರ್ಥಿಗಳು ಕನ್ನಡ ಪತ್ರಿಕೆ ಪುಸ್ತಕಗಳನ್ನು ಓದಿದರೆ ಎಂದಿಗೂ ಹಿನ್ನಡೆ ಆಗುವುದಿಲ್ಲ. ಸಾಹಿತ್ಯದ ಬದುಕಿಗೆ ಹಾಗೂ ಈ ಸಮಾಜಕ್ಕೆ ಒಳ್ಳೆಯ ವ್ಯಕ್ತಗಳಾಗಿ ಪರಿಚಯವಾಗುತ್ತಿರಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಕೊಪ್ಪಳದ ಸಾಹಿತಿ ಅಲ್ಲಮಪ್ರಭು  ಬೆಟ್ಟದೂರು ಕಥಾಸಂಕಲಗಳ ಬಿಡುಗಡೆ ಮಾಡಿ ಮಾತನಾಡಿದರು. ಕಲೆ, ಸಾಹಿತ್ಯ, ಸಂಸ್ಕøತಿ ಉಳಿದಿದ್ದರೆ ಅದು ಗ್ರಾಮೀಣ ಪ್ರದೇಶಗಳಿಗೆ ಮಾತ್ರ. ಈಗಲೂ ಗ್ರಾಮದಲ್ಲಿ ಕತೆ ಕೇಳಲು ನಾಟಕ ನೋಡಲು ಗುಂಪು ಗಟ್ಟಲೆ ಜನ ಸೇರುತ್ತಾರೆ. ನಗರ ಪ್ರದೇಶಗಳಲ್ಲಿ ಇವೆಲ್ಲ ಕಡಿಮೆಯಾಗಿದೆ. ಕೊಲೆ, ದರೋಡೆ, ಅಪರಾಧ ಸುದ್ದಿಗಳಿಗೆ ಮಾತ್ರ ಪ್ರಚೋದನೆ ನೀಡುತ್ತಾ ಬರುತ್ತಿದೆ. ವಿದ್ಯಾರ್ಥಿಗಳಲ್ಲಿ ಕನಸು ಹೊತ್ತ ಗುರಿ ಮೂಡಬೇಕು. ಅರ್ಹತೆಯನ್ನು ಗುರುತಿಸಲು ನಿರಂತರ ಓದಿನ ಜತೆ ಆಟವನ್ನು ಆಡಬೇಕು. ಪತ್ರಿಕೆಗಳನ್ನು ಓದಿದರೆ ಅತಿ ಹೆಚ್ಚು ಜ್ಞಾನ ಪಡೆದುಕೊಳ್ಳುವ ಶಕ್ತಿ ನಮಗಿರುತ್ತದೆ. ಸುದ್ದಿ ವಿಚಾರಗಳನ್ನು ವಿದ್ಯಾರ್ಥಿಗಳು ಚಿಂತನೆ ಮಾಡಬೇಕಾಗಿದೆ. ಯಾವುದಾದರೂ ಒಂದು ಸುದ್ದಿಯ ಬಗ್ಗೆ ಚರ್ಚೆ ಅದರ ವಿಶೇಷತೆಗಳನ್ನು ಅಳೆಯ ಬೇಕು. ಆಗ ಮಾತ್ರ ನಿಮಗೆ ಸಮಾಜದ ಹಾಗೂ ಇತರೆ ಜ್ಞಾನವನ್ನು ಪಡೆಯಬೇಕು ಎಂದರು.
ಕಾಲೇಜ್‍ನ ಉಪನ್ಯಾಸಕ ಡಾ.ಪ್ರಭು ಕಿಚಡಿ ಪ್ರಾಸ್ಥಾವಿಕವಾಗಿ ನುಡಿದರು, ಪ್ರಾಚಾರ್ಯರಾದ ಕೆ.ಮಾಧವ ಜೋಷಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕಿ ಅನುಪಮಾ ಕಾಲೇಜಿನ ಹಾಗೂ ವಿದ್ಯಾರ್ಥಿಗಳ ಬೆಳವಣಿಗೆಯ ಗುಣಗಾನ ಮಾಡಿದರು.

ಸಾಹಿತಿಗಳಾದ  ಡಾ.ಎಸ್.ಡಿ.ಸುಲೋಚನ, ಡಾ.ಟಿ.ಎಂ.ಉಷರಾಣಿ, ಅಬ್ದುಲ್.ಹೈ, ಅಂಜಲಿ, ನಗರಸಭೆ ಉಪನ್ಯಾಸಕಿ ನೂರ್ ಜಹಾನ್, ಕಾಲೇಜ್‍ನ ಉಪನ್ಯಾಸಕರಾದ ಎಂ.ಶಿವಕುಮಾರ್, ಮಂಜುನಾಥ್, ನಿಸಾರ್ ಅಹ್ಮದ್, ಸುನೀತ ಸೇರಿದಂತೆ ಅನೇಕರು ಉಪಸ್ತೀತರಿದ್ದರು.

ವರದಿ:ಮಂಜುನಾಥ ಅಯ್ಯಸ್ವಾಮಿ

Comments