UK Suddi
The news is by your side.

ತಮ್ಮಗಿಷ್ಟ ಬಂದಂತೆ ಬಂದ್ ಘೋಷಣೆ ಮಾಡುವವರ ವಿರುದ್ದ ಹೈಕೋರ್ಟ್ ಚಾಟಿ

ಬೆಂಗಳೂರು: ತಮ್ಮಗಿಷ್ಟ ಬಂದಂತೆ, ಇಷ್ಟ ಬಂದ ಸಮಯಕ್ಕೆ ಬಂದ್ ಘೋಷಣೆ ಮಾಡುವವರ ವಿರುದ್ದ ಹೈಕೋರ್ಟ್ ಚಾಟಿ ಬೀಸಿದೆ. ಮಹದಾಯಿ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸದಿದ್ದರೆ ಫೆ.4 ರಂದು ಬೆಂಗಳೂರು ಬಂದ್ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ಹೇಳಿದ್ದರು.

ರಾಜ್ಯ ಹೈಕೊರ್ಟ್ ನಲ್ಲಿ ಎನ್.ಜಿ.ಓ ಸಂಸ್ಥೆ ಕಳೆದ ಜ.22ರಂದು ನೀಡಿದ್ದ ಬಂದ್ ಗೆ ಸಂಬಂಧಪಟ್ಟಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತ್ತು. ಇದೇ ವೇಳೆ ಬಂದ್ ಗೆ ಕರೆ ನೀಡಿದ್ದ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು. ಇದಲ್ಲದೇ ಅರ್ಜಿಯಲ್ಲಿ ಬಂದ್ ಗೆ ಕರೆ ನೀಡಿದ್ದರಿಂದ ಅಪಾರವಾದ ನಷ್ಟ  ತುಂಬಿಕೊಡುವಂತೆ ಹೈಕೋರ್ಟ್ ನಲ್ಲಿ ಕೇಳಿಕೊಂಡಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾ.ಹೆಚ್.ಜಿ.ರಮೇಶ್ ಹಾಗೂ ನ್ಯಾ.ಪಿ.ಎಸ್.ದಿನೇಶ್ ಅವರಿದ್ದ ಹೈಕೋರ್ಟ್ ದ್ವಿಸದಸ್ಯ ಪೀಠ ವಿಚಾ ರಣೆ ನಡೆಸಿ ಬಂದ್ ಕರೆ ನೀಡುವುದು ಸಂವಿಧಾನ ಬಾಹಿರ. ಸಾರ್ವನಿಕರಿಗೆ ತೊಂದರೆಯಾಗದಂತೆ ಪ್ರತಿಭಟನೆ ಮಾಡಬೇಕು ಎಂದು ಅರ್ಜಿ ವಿಚಾರಣೆಯನ್ನು ಮೂರು ವಾರಕ್ಕೆ ಮೂಂದೂಡಿದೆ.

Comments