ಉಚಿತ ಟೊಮ್ಯಾಟೋ ನೀಡಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ.
ಬೆಳಗಾವಿ :ಮಾರುಕಟ್ಟೆಯಲ್ಲಿ ಟೊಮ್ಯಾಟೋ ಹಣ್ಣಿಗೆ ಯೋಗ್ಯವಾದ ಬೆಲೆ ಸಿಗದ ಕಾರಣ ಶನಿವಾರ ಭಾರತೀಯ ಕೃಷಿಕ ಸಮಾಜದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸಾರ್ವಜನಿಕರಿಗೆ ಉಚಿತ ಟಮೋಟೂ ವಿತರಿಸಿ ಹೊಸ ತರಹದ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ವಾಹನದಲ್ಲಿ ತುಂಬಿಕೊಂಡು ಬಂದಿದ್ದ ಟಮೋಟೂಗಳನ್ನು ರಸ್ತೆಯಲ್ಲಿ ಬರುತ್ತಿದ್ದ ಸಾರ್ವಜನಿಕರಿಗೆ ಕರೆ ಕರೆದು ಚೀಲದಲ್ಲಿ ಟಮೋಟೂ ವಿತರಿಸಿದ ಪ್ರತಿಭಟನಾಕಾರರು ಬಡ ರೈತರು ಬೆಳೆಯುವ ಹಣ್ಣು, ಕಾಯಿಪಲ್ಲೆಗಳಿಗೆ ಯೋಗ್ಯ ದರ ದೊರೆಯಲೂ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.
ಹೋಲಸೆಲ್ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಲೆ ಪ್ರತಿ ಕೆಜಿ ಗೇ ಕೇವಲ 1ರುಪಾಯಿ ದೊರೆಯುತ್ತಿದೆ,ರಿಟೇಲ್ ಮಾರುಕಟ್ಟೆಯಲ್ಲಿ ಕೆಜಿ ಟೊಮ್ಯಾಟೋಗೆ 15ರುಪಾಯಿಗೆ ಮಾರುತ್ತಿದೆ,ಅದರಿಂದ ಟೊಮ್ಯಾಟೋ ಕೊಯ್ಲು ಮಾಡಿದ ಕೆಲಸಗಾರಿಗೆ ಸಂಬಳ ಕೂಡಾ ಕೊಡಲು ಸಾಲುತ್ತಿಲ್ಲ, ಮಧ್ಯವರ್ತಿಗಳ ಹಾವಳಿಯಿಂದ ಯೋಗ್ಯ ದರ ದೊರೆಯುತ್ತಿಲ್ಲ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ರಾಮಲಿಂಗ ಕಾಡಪ್ಪನ್ನವರ, ವಿರೂಪಾಕ್ಷ ಸೀನನ್ನವರ,ಲಿಂಗರಾಜ ಪಾಟೀಲ, ಮಹಾದೇವ ದಾನಣ್ಣವರ, ಗುರುಗೌಡಾ ಪಾಟೀಲ, ಸೀಮಾ ಖೋತ, ಸವಿತಾ ಹೆಬ್ಬಾರ, ನಾರಾಯಣ ಪಾಟೀಲ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.