UK Suddi
The news is by your side.

ಜಯಶ್ರೀ ಅಬ್ಬಿಗೇರಿಯವರಿಗೆ ‘ಅಕ್ಷರ ಲೋಕದ ನಕ್ಷತ್ರ’ ಪ್ರಶಸ್ತಿ ಪ್ರದಾನ.

ಬೆಳಗಾವಿ:ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮೇದಕದಲ್ಲಿ ಜರುಗಿದ 2ನೇ ಕಲ್ಯಾಣ ಕರ್ನಾಟಕ ಗಡಿನಾಡು ಸಾಹಿತ್ಯ ಸಮ್ಮೇಳನದಲ್ಲಿ  ಮಾತೊಶ್ರೀ ನಾಗಮ್ಮ ಅಶಪ್ಪ ಬೋಪ್ಪಾಲ ಸ್ಮರಣಾರ್ಥವಾಗಿ ಕೊಡಮಾಡುವ 2017ನೇ ‘ಅಕ್ಷರ ಲೋಕದ ನಕ್ಷತ್ರ’ ಪ್ರಶಸ್ತಿಯನ್ನು ಬೆಳಗಾವಿಯ ಖ್ಯಾತ ಲೇಖಕಿ ಜಯಶ್ರೀ ಅಬ್ಬಿಗೇರಿಯವರಿಗೆ ‘ಹೊಡೆದ ಕಲ್ಲುಗಳಿಂದಲೇ ಕೋಟೆ ಕಟ್ಟಿಕೊಳ್ಳಿ’ ಎಂಬ ಕೃತಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಮ್ಮೇಳನ ಸರ್ವಾಧ್ಯಕ್ಷರಾದ ಮಹಿಪಾಲರೆಡ್ಡಿ ಮುನ್ನೂರ, ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ನಿರ್ದೇಶಕ ಎಚ್ ಟಿ ಫೋತೆ, ಸೇಡಂ ಸಹಾಯಕ ಆಯುಕ್ತ ಎಂ ರಾಮಪ್ಪ,ಪ್ರತಿಷ್ಠಾನದ ಸಂಚಾಲಕ ಯಾನಾಗುಂದಿ ಕೆ.ಮೊಗಲಪ್ಪ,ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Comments