UK Suddi
The news is by your side.

ಜಿಲ್ಲೆಯ ಮೂವರು ಶಾಸಕರು ಯಾವ ಕಂಡೀಷನ್ ಇಲ್ಲದೆ ಪಕ್ಷಕ್ಕೆ ಸೇರಿದ್ದಾರೆ:ಡಿಕೆ ಶಿವಕುಮಾರ.

ಬಳ್ಳಾರಿ:ಜಿಲ್ಲೆಯ ‌ಮೂವರು ಶಾಸಕರು ಕಾಂಗ್ರೆಸಗೆ ಸೇರ್ಪಡೆ ಆಗಿದ್ದಾರೆ.ಯಾವ ಕಂಡೀಷನ್ ಹಾಕದೆ ಪಕ್ಷಕ್ಕೆ ಬಂದಿದ್ದಾರೆ, ಪಕ್ಷಕ್ಕಾಗಿ ದುಡಿದವರಿಗೂ ಇಲ್ಲಿ ಮನ್ನಣೆ ಇದೇ ಎಂದರು. ಯಾರಿಗೂ ಟಿಕೆಟ್ ಆಶ್ವಾಸನೆ ನೀಡಿಲ್ಲ, ಪಕ್ಷಕ್ಕೆ ದುಡಿಯಲು ಬಂದಿದ್ದಾರೆ. ಹಾಲಿ, ಮಾಜಿ ಶಾಸಕರು ಕಾಂಗ್ರೆಸ್ ಗೆ ಸೇರ್ಪಡೆಯಾಗಲು ಸಿದ್ಧರಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸನಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಡಿಕೆ ಶಿವಕುಮಾರ್ ಹೇಳಿದರು.
ಫೆ.10ರಂದು ನಡೆಯಲಿರುವ ಕಾಂಗ್ರೇಸ್ ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸುವ ಹಿನ್ನೆಲೆಯಲ್ಲಿ ಹೊಸಪೇಟೆ ತಾಲೂಕು ಕ್ರೀಡಾಂಗಣ ಪರಿಶೀಲಿಸಲು ಸಚಿವ ಡಿ.ಕೆ.ಶಿವಕುಮಾರ್ ಹೊಸಪೇಟೆಗೆ ಆಗಮಿಸಿದ್ದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕೆಂದು ಪುಣ್ಯಭೂಮಿಯಾದ ವಿಜಯನಗರ ಸಾಮ್ರಾಜ್ಯದಿಂದಲೇ ಪ್ರಚಾರ ಆರಂಭಿಸಲಿದ್ದೇವೆ ಎಂದು ತಿಳಿಸಿದರು.

ಐದು ವರ್ಷ ನುಡಿದಂತೆ ನಡೆದಿದ್ದೇವೆ. ಬಳ್ಳಾರಿ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಗೌರವವಿದೆ. ಸೋನಿಯಾ ಗಾಂಧಿ ಅವರು ಇಲ್ಲಿ ಸ್ಪರ್ಧಿಸಿದ್ದರು, ಅತಿಹೆಚ್ಚು ಅನುದಾನ ನೀಡಿದ್ದರು. ಕಷ್ಟಕಾಲದಲ್ಲಿ ಬಳ್ಳಾರಿ ಜನ ಕೈಹಿಡಿದಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಭೀಮನಾಯ್ಕ, ಇ ತುಕಾರಾಂ, ನಾಗೇಂದ್ರ, ಮಾಜಿ ಶಾಸಕ ಆನಂದ್ ಸಿಂಗ್, ಸಿರಾಜ್ ಸೇಕ್, ಮುಖಂಡರಾದ ಇಮಾಮ್ ನಿಯಾಜಿ ಉಪಸ್ಥಿತರಿದ್ದರು.

ವರದಿ:ಮಂಜುನಾಥ ಅಯ್ಯಸ್ವಾಮಿ

Comments