UK Suddi
The news is by your side.

ಏಪ್ರಿಲ್ ತಿಂಗಳಲ್ಲಿ ಚಂದ್ರಯಾನ-2 ಉಡಾವಣೆ: ಇಸ್ರೋ

ನವದೆಹಲಿ: ಚಂದ್ರಯಾನ-1ರಲ್ಲಿ ಯಶಶ್ವಿಯಾದ ಇಸ್ರೋ ಚಂದ್ರಯಾನ-2ಕ್ಕೆ ಸಜ್ಜಾಗಿದೆ. ಚಂದ್ರಯಾನ-2ರ ಎಲ್ಲ ಕೆಲಸಗಳು ಎಪ್ರಿಲ್ ಒಳಗೆ ಮುಗಿಯಲಿದೆ. ಎಲ್ಲಾ ಅಂದುಕೊಂಡಂತೆ ಆದರೆ ಚಂದ್ರಯಾನ-2 ಏಪ್ರಿಲ್ ತಿಂಗಳಲ್ಲಿ ಉಡಾವಣೆಯಾಗಲಿದೆ ಎಂದು ಇಸ್ರೋ ತಿಳಿಸಿದೆ.
ಚಂದ್ರನಲ್ಲಿ ಇಗಾಗಲೇ  ಚಂದ್ರಯಾನ-II ನೌಕೆ ಇಳಿಯುವ ಪ್ರದೇಶವನ್ನೂ ಗುರುತಿಸಲಾಗಿದೆ ಎಂದು ಇಸ್ರೋ ಮುಖ್ಯಸ್ಥರಾದ ಡಾ.ಕೆ ಶಿವನ್ ಹೇಳಿದ್ದಾರೆ.
ಚಂದ್ರಯಾನ-II ನೌಕೆಯನ್ನು ಶ್ರೀಹರಿಕೋಟಾದಿಂದ ಉಡಾವಣೆಯಾಗಲಿದ್ದು, ಚಂದ್ರನಲ್ಲಿ ನೌಕೆ ಇಳಿಯುವುದಕ್ಕೆ ಎರಡು ಪ್ರದೇಶಗಳನ್ನು ಗುರುತಿಸಲಾಗಿದ್ದು ಯಾವುದೇ ಬೇರೆ ನೌಕೆ ಇಳಿಯದಂತಹ ಒಂದು ಜಾಗವನ್ನು ಅಂತಿಮಗೊಳಿಸಲಾಗುತ್ತದೆ ಎಂದು ಶಿವನ್ ತಿಳಿಸಿದ್ದಾರೆ. ಚಂದ್ರಯಾನ-2 ಕ್ಕೆ ಬಳಕೆ ಮಾಡಲಾಗುವ ನೌಕೆ 3,290 ಕೆಜಿಯಷ್ಟಿದೆ ಎಂದು ಅವರು ಹೇಳಿದರು.
ಈ ನೌಕೆಯು ಚಂದ್ರನಲ್ಲಿ  14 ದಿನಗಳು ಕಳೆಯುವಷ್ಟು ಸಾಮರ್ಥ್ಯವನ್ನು ಹೊಂದಿದ್ದು, 150-200 ಕಿಮೀ ನಷ್ಟು ಸಂಚರಿಸಲಿದೆ ಎಂದು ಇಸ್ರೋ ಮುಖ್ಯಸ್ಥರು ಹೇಳಿದ್ದಾರೆ.

Comments