UK Suddi
The news is by your side.

ಹಂಪಿ ಪ್ರವಾಸಿ ತಾಣವೇಂದರೆ ನನಗೆ ತುಂಬಾ ಇಷ್ಟ,ಇಲ್ಲಿನ ಸ್ಮಾರಕಗಳನ್ನು ನೋಡುತ್ತಿದ್ದರೆ ಮೈ ರೋಮಾಂಚನವಾಗುತ್ತೇ:ವ್ಹೀಲ್ ಚೇರ್ ಟೆನ್ನಿಸ್ ಆಟಗಾರ ಸಿಸ್ಕೊಗಾರ್ಸಿ.

ಹೊಸಪೇಟೆ:ಹಂಪಿ ಪ್ರವಾಸಿ ತಾಣವೇಂದರೆ ನನಗೆ ತುಂಬಾ ಇಷ್ಟವಾಗಿದೆ.ವಿಜಯನಗರ ಸಾಮ್ರಾಜ್ಯದ ಇತಿಹಾಸ, ಇಲ್ಲಿನ ಸ್ಮಾರಕಗಳು ನೋಡುತ್ತಿದ್ದರೆ ಈ ಹಿಂದೆ ಹೇಗಿರಬಹುದು ಎಂಬುದನ್ನು ಕಲ್ಪನೆ ಮಾಡಿಕೊಂಡರೆ ರೋಮಂಚನವಾಗುತ್ತದೆ.ಭಾರತವು ವಿಶ್ವದ ಸುಂದರ ದೇಶವಾಗಿದೆ ಎಂದು ಸ್ಪೇನ್ ದೇಶದ ವ್ಹೀಲ ಚೇರ್ ಟೆನ್ನಿಸ್ ಆಟಗಾರ ಸಿಸ್ಕೊಗಾರ್ಸಿ ಹೇಳಿದರು.

ವಿಶ್ವ ವಿಖ್ಯಾತ ಹಂಪಿಯಲ್ಲಿ ಭಾನುವಾರ ಪತ್ರಕರ್ತರ ಜತೆ ಮಾತನಾಡಿದ ಅವರು.ಇದು ನಾನು ಎರಡನೇ ಬಾರಿ ಹಂಪಿ ಪ್ರವಾಸ ಮಾಡಿರುವೆ.ಹಂಪಿ ಎಂದರೆ ನನಗೆ ಅಚ್ಚುಮೆಚ್ಚಿನ ತಾಣವಾಗಿದೆ.ಇಲ್ಲಿನ ಸ್ಮಾರಕಗಳನ್ನು ನೋಡಿದರೆ ಹಿಂದಿನ ಕತೆಯನ್ನು ಹೇಳುತ್ತದೆ. ಭಾರತದ ಜನರು ಆತ್ಮೀಯ ಹಾಗೂ ಒಳ್ಳೆಯ ಗುಣದವರಾಗಿದ್ದಾರೆ. ಇಲ್ಲಿ ಬರಲು ನನಗೆ ತುಂಬ ಇಷ್ಟವಾಗುತ್ತದೆ ಎಂದರು.
ಗಾರ್ಸಿ ಸ್ಪೇನ್ ದೇಶದ ಕೊರ್ಡೊಬಾ ಪ್ರದೇಶದವರು. ಹಂಪಿಗೆ ಈ ಮೊದಲು 2012ರಲ್ಲಿ ಭೇಟಿ ನೀಡಿದ್ದರು.ಆ ಸಮಯದಲ್ಲಿ ಇವರ ಕಾಲುಗಳು ಆರೋಗ್ಯವಾಗಿದ್ದವು. ಆದರೆ 2016ರಲ್ಲಿ ಅವರ ದೇಶದಲ್ಲಿ ಅಪಘಾತದಿಂದಾಗಿ ನಡೆದಾಡುವ ಶಕ್ತಿ ಕಳೆದುಕೊಂಡು ವ್ಹೀಲ ಚೇರ್‍ನಲ್ಲೆ ಜೀವಿಸಬೇಕಾಯಿತು. ನಂತರ ವ್ಹೀಲ ಚೇರ್ ಟೆನ್ನಿಸ್ ಆಡುತ್ತಿದ್ದೇನೆ. 2020ರ ಒಲಂಪಿಕ್‍ನಲ್ಲಿ ಭಾಗವಹಿಸುತ್ತೆನೆ. ಇದರಿಂದಾಗಿ 3ಗಂಟೆ ತಾಲೀಮು ನಡೆಸುತ್ತಿದ್ದೇನೆ ಎಂದು ಹೇಳಿದರು.
ಇವರು ಮದುವೆಯಾಗಲಿರುವ ರಾಕ್ವೇಲ ಜತೆ ಬಂದಿದ್ದರು. ಇವರು ರೋಲಿಂಗ್ ವಲ್ಡ್ರ್ಸ ಎಂಬ ಸಾಕ್ಷ್ಯಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಹಂಪಿಯ ಪ್ರಮುಖ ಸ್ಮಾರಕಗಳ ಮುಂದೆ ವೀಲ್ ಚೇರ್‍ನಲ್ಲಿ ಸಂಚರಿಸುವ ದೃಷ್ಯವನ್ನು ಚಿತ್ರೀಕರಸಲಾಯಿತು.

ವರದಿ:ಮಂಜುನಾಥ್ ಅಯ್ಯಸ್ವಾಮಿ

Comments