UK Suddi
The news is by your side.

ಕುಂದಗೋಳ:ಬಿಜೆಪಿಯಿಂದ ವಿಧಾನಸಭಾ ಚುನಾವಣಾ ಪ್ರಣಾಳಿಕೆಯ ಅಭಿಪ್ರಾಯ ಸಂಗ್ರಹ.

ಕುಂದಗೋಳ:ಇಂದು ಕುಂದಗೋಳ ಪಟ್ಟಣದ ಶಿವಾನಂದ ಮಠದಲ್ಲಿ ಭಾರತೀಯ ಜನತಾ ಪಕ್ಷದ 2018 ರ ವಿಧಾನ ಸಭಾ ಚುನಾವಣಾ ಪ್ರಣಾಳಿಕೆಯ ಅಭಿಪ್ರಾಯ ಸಂಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷರಾದ ಈರಣ್ಣ ಜಡಿ,ಎಂ ಆರ್ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು..
ಪ್ರಣಾಳಿಕೆಯ ಬೇಡಿಕೆ ಈ ರೀತಿಯಾಗಿವೇ:

  •  60 ವರ್ಷ ಮೇಲ್ಪಟ್ಟ ರೈತರಿಗೆ ಪ್ರತಿ ತಿಂಗಳಿಗೆ 3000 ರೂ. ಪಿಂಚಣಿ ನೀಡವುದು.
  •  ತಾಲ್ಲೂಕಿನ ಪ್ರಮುಖ ನಾಲ್ಕು ಕಡೆ ಹವಾ ನಿಯಂತ್ರಿತ ಉಗ್ರಾಣ ವ್ಯವಸ್ಥೆ ಮಾಡುವುದು.
  • ಪ್ರತಿ ವಾಡ್ ಗೆ ಒಂದು ಶುಧ್ಧ ನೀರಿನ ಘಟಕ.
  • ಪ್ರತಿ ಗ್ರಾಮ ಪಂಚಾಯತ್ ಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶು ಚಿಕಿತ್ಸಾಲಯ ತೆರೆಯುವುದು.
  • ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸಲು ಕೌಲಶ್ಯ ಅಭಿವೃದ್ಧಿ ಯೋಜನೆಯನ್ನು ಇನ್ನಷ್ಟು ವಿಸ್ತರಿಸುವುದು.
  •  ಪ್ರತಿ ಗ್ರಾಮದಲ್ಲು ಒಳ್ಳೆಯ ರಸ್ತೆ ,ಚರಂಡಿ, ನಿರ್ಮಾಣ ಹಾಗೂ ಹೊಲಗಳಿಗೆ ಹೊಗುವ ಮಾರ್ಗ ನಿರ್ಮಾಣ ಮಾಡುವುದು.
  • ರೈತರ ಬೆಳೆಗಳಿಗೆ ಉತ್ತಮ ಬೆಲೆ ನಿಡಲು, ಆಯೋಗ ರಚಿಸುವುದು.

Comments