UK Suddi
The news is by your side.

ಪಾತ್ರ ನಮ್ಮದೆ, ಆದರೆ ಸಿನಿಮಾ ಬೇರೆಯದು:ಮಾಜಿ ಶಾಸಕ ಅನಂದ್ ಸಿಂಗ್

ಹೊಸಪೇಟೆ :ಈ ಭಾಗದ ಜನರು ಈ ಬಾರಿ ಬದಲಾವಣೆ ಬಯಸಿದ್ದಾರಾದರೂ, ಪಕ್ಷ ಬದಾವಣೆ ಮಾತ್ರ ನನ್ನ ವೈಯಕ್ತಿಕವಾಗಿದೆ. ಟಿಕೇಟ್ ಯಾರಿಗೆ ಎಂಬುದನ್ನು ಪಕ್ಷ ತೀರ್ಮಾನ ಮಾಡಿದರೂ, ಯಾರಿಗೆ ಸಿಕ್ಕರು ಪಕ್ಷಕ್ಕಾಗಿ ದುಡಿಯುವುದಾಗಿ ಮಾಜಿ ಶಾಸಕ ಆನಂದ್‍ಸಿಂಗ್ ಹೇಳಿದರು. 
ಹೊಸಪೇಟೆ ತಾಲೂಕಿನ ಕಮಾಲಪುರದಲ್ಲಿ ಸವಿತಾ ಸಮಾಜದಿಂದ ಇಂದು ಆಯೋಜಿಸಲಾಗಿದ್ದ ಶ್ರೀ ಭಗವಾನ್ ಸವಿತಾ ಮಹರ್ಷಿ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ಈ ಭಾಗದ ಜನತೆ ಬದಲಾವಣೆ ಬಯಸುತ್ತಿದ್ದಾರೆ. ಪಾತ್ರ ನಮ್ಮದೆ, ಆದರೆ ಸಿನಿಮಾ ಬೇರೆದು.  ಕ್ಷೇತ್ರದ ಟಿಕೇಟ್ ಮುಂದೆ ಪಕ್ಷ ತಿರ್ಮಾನ ಮಾಡುತ್ತದೆ ಏನಾಗುತ್ತೆ ಗೊತ್ತಿಲ್ಲ.ಯಾರಿಗೆ ಸಿಕ್ಕರು ಪಕ್ಷಕ್ಕೆ ಒಲವು ಇರಲಿ. ದ್ವೇಷದ ರಾಜಕೀಯ ಮಾಡಬಾರದು. ಕ್ಷೇತ್ರದ ಅಭಿವೃದ್ಧಿ ನಮ್ಮ ಗುರಿಯಾಗಿರಬೇಕು.ನನಗೆ ಕಮಲಾಪುರದಲ್ಲಿ ಇನ್ನೂ ಹೆಚ್ಚು ಅಭಿವೃದ್ದಿ ಮಾಡಬೇಕಿದೆ. ವಿಜಯನಗರ ಜಿಲ್ಲೆಯಲ್ಲೇ ಆರೋಗ್ಯಕರ ಕ್ಷೇತ್ರವಾಗಿದೆ ಎಂದರು.

ಯಾವುದೇ ಸಮುದಾಯವನ್ನು ಕೀಳರಿಮೆಯಿಂದ ನೋಡಬಾರದು.ಸಮಾನತೆಯಿಂದ ನೋಡುವ ಮೂಲಕ ಉತ್ತಮ ಸಮಾಜವನ್ನು ಕಟ್ಟಬೇಕು.ಅದಕ್ಕಾಗಿ ಜೀವನದಲ್ಲಿ ಉತ್ತಮ ಸಂಘಟನೆ, ಬುದಿವಂತಿಕೆ ಹಾಗೂ ರಾಜಕಿಯದಲ್ಲಿ ಚಾಣಕ್ಯನ ಮಾದರಿಯಲ್ಲಿ ಕಾರ್ಯ ರೂಪಿಸಬೇಕು. ಮನುಷ್ಯನ ಜೀವನದಲ್ಲಿ ಅರ್ಧದಷ್ಟು ಮಲಗಿರುತ್ತಾರೆ.ಇನ್ನೂ ಅರ್ಧದಷ್ಟು ಜೀವನದಲ್ಲಿ ಅಂದರೆ 30 ರಿಂದ 35 ವರ್ಷದಲ್ಲಿ ಮಾಡಬಾರದೆಲ್ಲ ಮಾಡುತ್ತಾರೆ. ಇದರ ಬದಲು ಸಮಾಜಕ್ಕೆ ಏನಾದರು ಕೊಡುಗೆಯನ್ನು ನೀಡಬೇಕು ಎಂದರು.

ಜೆಡಿಎಸ್‍ನ ತಾಲೂಕಾಧ್ಯಕ್ಷ ಶಫಿಬ ರಕಾತಿ, ಪಪಂ ಸದಸ್ಯರಾದ ಗೋಪಾಲ,ಮಾಬಾಷ,ಶಿವರಾಮ, ನಗರಸಭೆ ಸದಸ್ಯ ರೂಪೇಶ್ ಕುಮಾರ್, ಮುಖಂಡರಾದ ಹನುಮಂತಪ್ಪ, ಶ್ರೀನಿವಾಸ, ಅಂಜಿನಪ್ಪ, ನಿಂಗಪ್ಪ, ಅಮರೇಶ್, ಶಂಕರ್, ಹೊನ್ನುರಸ್ವಾಮಿ, ಪಂಪಣ್ಣ ಮಾರುತಿ ವೆಂಕಟೇಶ, ಮರ್ಧಾನ್ ಮತ್ತಿತರರಿದ್ದರು.

ಮತ ಯಾಚಿಸಿದ ಮಾಜಿ ಶಾಸಕ ಅನಂದ್ ಸಿಂಗ್:

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಮತ ನೀಡುತ್ತಿರಿ ಎಂದು ಮಹಿಳೆಯರಿಗೆ ಮಾಜಿಶಾಸಕ ಆನಂದ್ ಸಿಂಗ್ ಕೇಳಿದರು.ಇಷ್ಟು ದಿನ ನಾನು ಕಮಲದ ಗುರುತಿನಲ್ಲಿದೆ. ಈಗ ನಾನು ಕೈ ಗುರುತಿಗೆ ಬಂದಿರುವೆ. ಹಿಂದಿನ ಕಮಲದ ಗುರುತಿಗೆ ಮತ ಹಾಕದೇ ಹಸ್ತದ ಗುರುತಿಗೆ ಮತ ಹಾಕಬೇಕು ಎಂದು ಮತಯಾಚನೆ ಮಾಡಿದರು. 

ವರದಿ:ಮಂಜುನಾಥ ಅಯ್ಯಸ್ವಾಮಿ

Comments