UK Suddi
The news is by your side.

ಮಹದಾಯಿ ನ್ಯಾಯಾಧಿಕರಣ ವಿಚಾರಣೆ ಫೆ.8ಕ್ಕೆ

ಬೆಂಗಳೂರು: ಮಹದಾಯಿ ನೀರು ಹಂಚಿಕೆ ಸಂಬಂಧ ನ್ಯಾಯಾಧಿಕರಣ ವಿಚಾರಣೆಯು ಫೆ.8ಕ್ಕೆ ಮುಂದೂಡಲ್ಪಟ್ಟಿದೆ.
ನೀರು ಹಂಚಿಕೆ ವಿವಾದ ಕುರಿತು ಕರ್ನಾಟಕದ ವಿರುದ್ಧ ಗೋವಾ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ಫೆ.13ಕ್ಕೆ ಮಂದೂಡಿದ ನ್ಯಾಯಾಧಿಕರಣ ಉಳಿದ ಪ್ರಕರಣದ ವಿಚಾರಣೆಯನ್ನು ಫೆ.8ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ. ವಾದ ಮಂಡನೆಗಾಗಿ ಗೋವಾ ಸರ್ಕಾರ ಕಾಲಾವಕಾಶ ಕೇಳದ ಕಾರಣ ವಿಚಾರಣೆ ಮುಂದೂಡಲಾಗಿದ್ದು ಫೆ.22ರ ಒಳಗೆ ವಾದ ಮಂಡನೆ ಸಂಪೂರ್ಣಗೊಳಿಸಬೇಕೆಂದು ಆದೇಶ ನೀಡಿದೆ.

Comments