UK Suddi
The news is by your side.

ಮಹದಾಯಿ ವಿವಾದ ನ್ಯಾಯಾಧೀಕರಣಕ್ಕೆ ಹೋಗಲು ಕಾಂಗ್ರೆಸ್ ಕಾರಣ:ಪ್ರಹ್ಲಾದ್ ಜೋಶಿ

ನವದೆಹಲಿ: ಮಹದಾಯಿ ವಿವಾದ ನ್ಯಾಯಾಧೀಕರಣಕ್ಕೆ ಹೋಗಲು ಕಾಂಗ್ರೆಸ್ ಕಾರಣ. ಈ ಹಿಂದೆ ಸೋನಿಯಾಗಾಂಧಿ ಗೋವಾಗೆ ಭೇಟಿ ಕೊಟ್ಟಾಗ ಕರ್ನಾಟಕಕ್ಕೆ ಒಂದು ಹನಿ ನೀರು ಬಿಡಲ್ಲ ಎಂದಿದ್ದರು.ಸುಪ್ರೀಂಕೋರ್ಟ್ ಗೆ ಅಂದಿನ ಯುಪಿಎ ಸರ್ಕಾರ ಅಫಿಡೆವೆಟ್ ಸಲ್ಲಿಸಿದ್ದರು. ಈಗ ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಇಂದು ನಡೆದ ಲೋಕಸಭೆ ಕಲಾಪದಲ್ಲಿ ಪ್ರಹ್ಲಾದ್ ಜೋಶಿ ಗಂಭೀರವಾಗಿ ಆರೋಪಿಸಿದರು.
ಲೋಕಸಭೆ ಕಲಾಪದಲ್ಲಿ ಮಾತನಾಡಿದ ಸಂಸದ ಪ್ರಹ್ಲಾದ್ ಜೋಶಿ, ಸಿಎಂ ಸಿದ್ದರಾಮಯ್ಯ ಪದೇ ಪದೆ ಅಚ್ಛೇ ದಿನ್‌ ಎಲ್ಲಿ ಬಂದಿದೆ ಎಂದು ಕೇಳುತ್ತಾರೆ. ಕಾಂಗ್ರೆಸ್‌ನವರಿಗೆ ಎಂದಿಗೂ ಅಚ್ಛೇ ದಿನ್‌ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಅಚ್ಛೇ ದಿನ್‌ ಬರಲ್ಲ. ದೇಶದಲ್ಲಿ 60 ವರ್ಷಗಳ ಕಾಲ ಕಾಂಗ್ರೆಸ್‌ ಆಡಳಿತ ನಡೆಸಿದೆ. ಆದರೆ, ಮಹದಾಯಿ ಸಮಸ್ಯೆಯನ್ನು ಬಗೆಹರಿಸಿಲ್ಲ. ಮನಮೋಹನ್‌ ಸಿಂಗ್‌ ಏಕೆ ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿದ್ದರು ಎಂದು ಪ್ರಶ್ನಿಸಿದರು.

Comments