UK Suddi
The news is by your side.

ಸ್ವಾಮಿ ವಿವೇಕಾನಂದರಂತ ಮಹಾನ್ ವ್ಯಕ್ತಿಗಳ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು; ಚಕ್ರವರ್ತಿ ಸೂಲಿಬೆಲೆ

 

ಪಾವಗಡ : ದೇಶದ ಘನತೆ ಮತ್ತು ಗೌರವವನ್ನು ಎತ್ತಿ ಹಿಡಿಯುವಂತಹ ಶಕ್ತಿ ಯುವಕರಲ್ಲಿ ಮೂಡಬೇಕು ಎಂದು ಖ್ಯಾತ ಅಂಕಣಕಾರ ಹಾಗೂ ಭಾಷಣಕಾರ ಚಕ್ರವರ್ತಿ ಸೂಲಿಬೆಲಿ ತಿಳಿಸಿದರು.

ಪಾವಗಡ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ನಡೆದ ಸ್ವಾಮಿ ವಿವೇಕಾನಂದರ 156 ನೇ ಜಯಂತ್ಯುತ್ಸವ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಯುವಕರ ಮನಸ್ಸುಗಳು ಬೇಡವಾದ  ಸಾಹಿತ್ಯದ ಕಡೆ ಗಮನ ಹರಿಸುತ್ತಿವೆ. ಯುವಕರಿಗೆ ಮಾರ್ಗದರ್ಶನದ ಕೊರತೆ ಇದೆ, ಕಾಲಿಲ್ಲದ ಅಂಗವಿಕಲೆ ಅರುಣಾ ಸಿನ್ಹಾ ಗೆ ಹಿಮಾಲಯ ಪರ್ವತ ಏರಲೂ ಪ್ರೇರಣೆಯಾಗಿದ್ದು, ಒಬ್ಬ ಚಾಯಾ ವಾಲ ಪ್ರಧಾನಿಯಂತಹ ಉನ್ನತ ಹುದ್ದೆಗೆ ಏರಲೂ ಸಹಾಯಕವಾದ ಶಕ್ತಿ ಸ್ವಾಮಿ ವಿವೇಕಾನಂದರ ಪ್ರೇರಣೆ ಎಂದು ಉದಾಹರಣೆಯೊಂದಿಗೆ ವಿಶ್ಲೇಷಿಸಿದರು. ಸ್ವಾಮಿ ವಿವೇಕಾನಂದರಂತಹ  ಮಹಾನ್ ವ್ಯಕ್ತಿಯ ತತ್ವ ಆದರ್ಶಗಳನ್ನು ನಾವುಗಳು ಅಳವಡಿಸಿಕೊಂಡಲ್ಲಿ ನಮ್ಮಲ್ಲಿ ಅದ್ಬುತವಾದ ಆತ್ಮಶಕ್ತಿ ಮೂಡುತ್ತದೆ ಎಂದರು.

ವಿದ್ಯಾರ್ಥಿಗಳು ಆತ್ಮಸ್ಥೈ ರ್ಯವನ್ನು ಬೆಳಸಿಕೊಳ್ಳಬೇಕು, ಸೇವಾ ಮನೋಭಾವನೆ ಯಾರಲ್ಲಿ ಇರುತ್ತದೋ ಅಂತಹ ವ್ಯಕ್ತಿಗಳು ವಿಶ್ವದ ಅಗ್ರಮಾನ್ಯ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲುತ್ತಾರೆ. ನಮ್ಮ ನಡತೆ, ಗುಣ-ಲಕ್ಷಣಗಳು ನಮ್ಮ ಶಿಕ್ಷಣದ ಗುಣಮಟ್ಟವನ್ನು ಅಳೆಯುತ್ತದೆ. ಆದ್ದರಿಂದ ಶಿಕ್ಷಣಾರ್ಥಿ ಉತ್ತಮ ಮೌಲ್ಯಗಳನ್ನು ಬೆಳಸಿಕೊಂಡು ಇತರರಿಗೆ ಮಾದರಿಯಾಗಬೇಕು ಆಗ ಮಾತ್ರ ವಿವೇಕಾನಂದರ ಕನಸು ನನಸಾಗುತ್ತದೆ ಎಂದರು.

Comments