UK Suddi
The news is by your side.

ಕಾರು ಅಪಘಾತದಲ್ಲಿ ಮೋದಿ ಪತ್ನಿ ಜಶೋದಾಬೆನ್ ತಲೆಗೆ ಗಂಭೀರ ಗಾಯ

ಜೈಪುರ: ರಾಜಸ್ತಾನದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪ್ರಧಾನಿ ಮೋದಿ ಅವರ ಪತ್ನಿ ಜಶೋದಾಬೆನ್ ಅವರ ತಲೆಗೆ ಗಂಭೀರವಾಗಿ ಗಾಯವಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ರಾಜಸ್ತಾನದ ಕೋಟಾ-ಚಿತ್ತೋರ್ ಹೆದ್ದಾರಿಯಲ್ಲಿ ಈ ಕಾರು ಅಪಘಾತ ಸಂಭವಿಸಿದ್ದು, ಘಟನೆಯವ್ವಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿರುವ ಜಶೋದಾಬೆನ್ ಅವರನ್ನು ಚಿತ್ತೋರ್ ಘಡ್ ನಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಜಶೋದಾ ಬೆನ್ ಅವರ ಕುಟುಂಬದ ಮೂಲಗಳು ತಿಳಿಸಿರುವಂತೆ ರಾಜಸ್ತಾನದ ಕೋಟಾದಲ್ಲಿ ಸಂಬಂಧಿಕರ ಮದುವೆಗೆ ತೆರಳಿದ್ದ ಜಶೋದಾಬೆನ್ ಅವರು ಗುಜರಾತ್ ಗೆ ಕಾರಿನಲ್ಲಿ ವಾಪಸ್ ಆಗುತ್ತಿದ್ದರಂತೆ. ಜಶೋದಾ ಬೆನ್ ಅವರೊಂದಿಗೆ ಅವರ ಸಹೋದರ ಅಶೋಕ್ ಮೋದಿ ಅವರು ಕೂಡ ತೆರಳಿದ್ದರು. ಗುಜರಾತ್ ವಾಪಸ್ ಆಗುತ್ತಿದ್ದಾಗ ಈ ಘಟನೆ ಸಂಭಸಿದೆ ಎನ್ವಲಾಗಿದೆ.

Comments