UK Suddi
The news is by your side.

ಕೃಷ್ಣಮಠ ಸರಕಾರ ಸ್ವಾಧೀನಪಡಿಸಿದರೆ ಮಠದಿಂದ ಹೊರಬರುವೆ: ಪೇಜಾವರ ಶ್ರೀ

ಉಡುಪಿ: ಕೃಷ್ಣಮಠವನ್ನು ಸರಕಾರ ಸ್ವಾಧೀನಪಡಿಸಿದರೆ ನಾನು ಮಠದಿಂದ ಹೊರಬರುವೆ. ಸರಕಾರದ ನೌಕರನಾಗಿ ನಾನು ಮಠದಲ್ಲಿ ಇರಲಾರೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಆರಾಧನಾ ಸ್ಥಳ ಸರಕಾರೀಕರಣಗೊಳಿಸುವ ವಿಚಾರ ಈವರೆಗೂ ಯಾವುದೇ ಮೂಲಗಳಿಂದ ಖಚಿತಪಡಿಸಿಲ್ಲ. ಸ್ವಾಧೀನಪಡಿಸುವ ಪ್ರಕ್ರಿಯೆ ಇಲ್ಲದೇ ಇದ್ದಲ್ಲಿ ನಮ್ಮ ವಿರೋಧವಿಲ್ಲ. ಸರಕಾರವೇ ಪ್ರತಿಪಕ್ಷದ ಅಸ್ತ್ರ ಕೊಟ್ಟಂತಾಗಿದೆ. ನಾನು ಇದರ ವಿರುದ್ಧ ಹೋರಾಟ ಮಾಡಲ್ಲ, ತೀರ್ಮಾನ ತೆಗೆದುಕೊಳ್ಳುವುದನ್ನು ಜನರಿಗೆ ಬಿಟ್ಟಿದ್ದೇನೆ. ಇದರಿಂದ ಸರಕಾರ ಹಿಂದೂ ವಿರೋಧಿ ಎನ್ನುವುದು ಸ್ಪಷ್ಟವಾಗುತ್ತಿದೆ. ಜಾತ್ಯತೀತ ಸರಕಾರ ಈ ರೀತಿ ಮಾಡಬಾರದು. ಅಲ್ಪಸಂಖ್ಯಾತ, ಬಹುಸಂಖ್ಯಾತರನ್ನು ಸಮಾನವಾಗಿ ನೋಡಬೇಕು ಎಂದರು.

Comments