ಜೈನ ಬಸೀದಿಗಳನ್ನು ಮುಜರಾಯಿ ವ್ಯಾಪ್ತಿ ತರುವುದು ಸರಿಯಲ್ಲ: ಶಾಸಕ ಸಂಜಯ ಪಾಟೀಲ
ಬೆಳಗಾವಿ: ರಾಜ್ಯ ಸರ್ಕಾರ ಜೈನ ಸಮುದಾಯದ ಬಸೀದಿ ಮತ್ತು ಮಠಗಳನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಿಸಲು ಹುನ್ನಾರ ನಡೆಸುತ್ತಿದೆ. ಸರ್ಕಾರ ಈ ನಿರ್ಣಯವನ್ನು ಹಿಂಪಡೆಯಬೇಕೆಂದು ಶಾಸಕ ಸಂಜಯ ಪಾಟೀಲ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈನ ಸಮುದಾಯದ ಮಠ ಹಾಗೂ ಬಸಿದಿಗಳು ಪಾರಂಪರಿಕವಾಗಿ ತಮ್ಮ ಸಂಪ್ರದಾಯಗಳೊಂದಿಗೆ ಮುನ್ನಡಯುತ್ತಿವೆ. ಆದರೆ ರಾಜ್ಯ ಸರ್ಕಾರ ಜೈನ ಸಮುದಾಯ ಮಠಗಳನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೊಳಪಡಿಸಲು ಮುಂದಾಗಿರುವುದು ನಮ್ಮ ಸಮುದಾಯದ ಧಾರ್ಮಿಕ ಭಾವನೆಗಳಿಗೆ ತೀವ್ರ ನೋವುಂಟು ಮಾಡಲಿದೆ. ಆದ್ದರಿಂದ ತಕ್ಷಣ ಸರ್ಕಾರ ತಮ್ಮ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.