UK Suddi
The news is by your side.

ಘಟಪ್ರಭಾ:ವಿದ್ಯುತ್ ಅವಘಡ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿ ಭಸ್ಮ

ಬೆಳಗಾವಿ:ಘಟಪ್ರಭಾ ನಗರದ ಪ್ರಮುಖ ರಸ್ತೆ ಬದಿಯಲ್ಲಿ ಇರುವ ಕೀರ್ತಿ ಬಾರ್ & ರೆಸ್ಟೊರೆಂಟ್‍ಗೆ ಇಂದು ಬೆಳಿಗ್ಗಿನ ಜಾವ ವಿದ್ಯುತ್ ಅವಘಡದಿಂದ ಬೆಂಕಿ ತಗುಲಿ ಸುಮಾರು 9 ಲಕ್ಷಕ್ಕೂ ಹೆಚ್ಚು ಮೌಲ್ಯದ ಸಾಮಾಗ್ರಿಗಳು ಸುಟ್ಟು ಹೋಗಿವೆ. ಒಳಗಡೆ ಮಲಗಿದ್ದ ಕಾರ್ಮಿಕರು ಇನ್ನೊಂದು ಕಟ್ಟಡಕ್ಕೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.

ಬಾರ್ ಕೌಂಟರನ ಹತ್ತಿರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ವಿದ್ಯುತ್ ಅವಘಡದಿಂದ ಬೆಂಕಿ ಹತ್ತಿಕೊಂಡು ಈ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದೆ. ಕೌಂಟರ ಹತ್ತಿರ ಹೆಚ್ಚಿನ ದರ ಮದ್ಯದ ಬಾಟಲಿ, ಪ್ರೀಜ್, ಕಂಪ್ಯೂಟರ್, ಟಿವಿ, ಹಾಗೂ ಇನ್ನಿತರ ಬೆಲೆ ಬಾಳುವ ಸಾಮಾಗ್ರಿಗಳು ಸುಟ್ಟು ಹೋಗಿವೆ. 

ಅಗ್ನಿಶಾಮಕ ಘಟಕದವರು ಸ್ಥಳಕ್ಕೆ ಬರುವುದಕ್ಕೆ ಮುಂಚೆಯೇ ಕೀರ್ತಿ ಬಾರ್ &ರೆಸ್ಟೋರೆಂಟ್ ಕೆಲಸಗಾರರು ಬೊರವೆಲ್ ಚಾಲು ಮಾಡಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಘಟನಾ ಸ್ಥಳಕ್ಕೆ ಪೋಲಿಸ್ ಇಲಾಖೆ, ಹೆಸ್ಕಾಂ ಇಲಾಖೆ ಹಾಗೂ ಅಬಕಾರಿ ಇಲಾಖೆಯವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Comments