UK Suddi
The news is by your side.

ಬೆಳಗಾವಿ ನಗರದಲ್ಲಿ ಫೆ.14ರಿಂದ ಪಾಸಪೋರ್ಟ್ ಸೇವಾ ಕೇಂದ್ರ ಆರಂಭ.

ಬೆಳಗಾವಿ:ಬೆಳಗಾವಿ ಜಿಲ್ಲೆಯ ಜನರಿಗೆ ಸಿಹಿ ಸುದ್ದಿ ಬಂದಿದೆ.ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಂಚೆ ಇಲಾಖೆಯೊಡನೆ ಪಾಲುದಾರಿಕೆಯಲ್ಲಿ ಬೆಳಗಾವಿಯಲ್ಲಿ ಪೋಸ್ಟ್ ಆಫಿಸ್ ಪಾಸ್’ಪೋರ್ಟ್ ಸೇವಾ ಕೇಂದ್ರವನ್ನು (POPSK) ಆರಂಭಿಸಲಿದೆ.

ರೈಲ್ವೇ ನಿಲ್ದಾಣದ ಬಳಿಯಿರುವ ಕ್ಯಾಂಪ್ ಅಂಚೆ ಕಚೇರಿಯಲ್ಲಿ ಈ ಸೇವಾಕೇಂದ್ರವು ಫೆ.14ರಂದು ಕಾರ್ಯಾರಂಭ ಮಾಡಲಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಫೆ,12ರಿಂದ 50 ಅಪಾಯಿಂಟ್’ಮೆಂಟ್’ಗಳನ್ನು ಬಿಡುಗಡೆ ಮಾಡಲಾಗುವುದು. ಸಂಭಾವ್ಯ ಅರ್ಜಿದಾರರು ಅಪಾಯಿಂಟ್’ಮೆಂಟನ್ನು ಆನ್’ಲೈನ್’ನಲ್ಲಿ ತೆಗೆದುಕೊಳ್ಳಬಹುದು ಮತ್ತು ನಿಗದಿಪಡಿಸಲಾದ ದಿನಾಂಕ/ಸಮಯದಲ್ಲಿ POPSK ಗೆ ಭೇಟಿ ನೀಡಿ ತಮ್ಮ ಅರ್ಜಿಯನ್ನು ಸಂಸ್ಕರಿಸಬಹುದು, ಎಂದು ತಿಳಿಸಲಾಗಿದೆ.

Comments