UK Suddi
The news is by your side.

ಮನುಷ್ಯ ಹೀಗೇಕೆ..

ಈ ಭೂಮಂಡಲದಲ್ಲಿ ಯಾವದೇ ಬಗೆಯಲ್ಲಿ ವಿಶೇಷ ಶಕ್ತಿಯನ್ನು ,ಯಾವ ಪ್ರಾಣಿಯೂ ಹೊಂದಿಲ್ಲ.
ಅಂಥ ಸಂದರ್ಭದಲ್ಲಿ ಮನುಷ್ಯನ ವರ್ತನೆ ಹೀಗೇಕೆ ಇದೆ ಅಂತ ನನ್ನ ಕಾಡುವ ಪ್ರಶ್ನೆಗೆ ಉತ್ತರಿಸಲು ಯಾರಿಗೂ ಸಾಧ್ಯವಿಲ್ಲ ಎಂಬುದು ಕಟು ಸತ್ಯ ಸಂಗತಿ. ಒಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬೀರುವ ಯಾವದೇ ಅಹಿತಕರ ಘಟನೆ ಕೂಡ ತಪ್ಪೆ;ಅಂಥದ್ದರಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆಯ ಮೇಲೇ ಸದಾ ಒಂದಿಲ್ಲೊಂದು ರೀತಿಯಲ್ಲಿ ಅಹಿತಕರ ಘಟನೆಗಳು ನಡೆದವು. ನಡೆಯುತ್ತಲೇ ಇವೆ. ಇದಕ್ಕೇ ಕೊನೆಯೇ ಇಲ್ವಾ. ಛೇ ಅಸಹ್ಯ ಎನಿಸುತ್ತದೆ ಇಂಥ ಸಂದರ್ಭದಲ್ಲಿ ಇಂಥ ಸಮಾಜದಲ್ಲಿ ನಾನೂ ಸಹ ಇಬ್ಬಳು ಎಂದುಕೊಂಡು ಬದಕಲು ಸಹ ಇರುಸು ಮುರುಸು ಆಗ್ತಿದೆ. ಕಾಡ ಮೃಗಗಳು ಕೂಡ ಈ ರೀತಿಯ ವರ್ತನೆಯನ್ನು ಮಾಡಲ್ಲ ಆದ್ರೆ ಪುರುಷರ ಅಟ್ಟಹಾಸಕ್ಕೆ ಅವರ ದಾಹಕ್ಕೆ ಇನ್ನುಮುಂದೆ ಎಷ್ಟು ಮಹಿಳೆಯರು ಬಲಿ ಆಗಬೇಕು???ವ್ಯವಸ್ಥೆ ಮತ್ತು ಅದರ ಜೊತೆಗೆ ಮಾನಸಿಕವಾಗಿ ಹಿಂಸೆ ದೈಹಿಕ ಹಿಂಸೆ ಸಾಲದ್ದಕ್ಕೆ, ಅಮಾನುಷ್ಯ ಹತ್ಯೆ ಮಾಡಿದ ಅವರು ಏನು ಪುರುಷಾರ್ಥ ಸಾಧಿಸಿದರು!!!???.
ಭಾರತದಲ್ಲಿ ಮಹಿಳೆಯರು ಮತ್ತು ಅವರ ಬಗ್ಗೆ ಪವಿತ್ರವಾದ ಭವ್ಯ ನಿಲುವುಗಳನ್ನು ಹೊಂದಿದ ದೇಶದಲ್ಲಿ ಈಗ ಮಹಿಳೆಯರಿಗೆ ಗೌರವದಿಂದ ಕಾಣುವುದು ಸಮಾನವಾಗಿ ನೋಡಿಕೊಳ್ಳುವುದು ಅಕ್ಕ ತಂಗಿ ತರ ನೋಡುವದು ಎಲ್ಲವೂ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ನಶಿಸಿ ಹೋಗಿದೆ ಎನ್ನುವಲ್ಲಿ ಎರೆಡು ಮಾತಿಲ್ಲ. ಪ್ರತಿಯೊಂದು ಹಂತದಲ್ಲೂ ಮಹಿಳೆಯರ ಕಾಮಕ್ಕೆ ಬಳಸುವುದು ಅವರನ್ನು ಭೋಗಿಸುವದು ಇದೇನಾ ಭಾರತದ ಸಂಸ್ಕೃತಿ!!!! ಮಹಿಳೆಯರ ಮಹಾರಾಣಿ ಎಂದು ಗೌರವದಿಂದ ಕಂಡ ವಿವೇಕಾನಂದರು, ನಡು ರಾತ್ರಿ ವೇಳೆ ಮಹಿಳೆಯರು ಸ್ವಾತಂತ್ರವಾಗಿ ತಿರುಗಾಡಲು ಅವಕಾಶ8 ಕೊಡುವ ನಿಟ್ಟಿನಲ್ಲಿ ಪ್ರಯತ್ನ ದ ಗಾಂಧೀಜಿಯವರ ಸ್ವತಂತ್ರ ಭಾರತದ ಕನಸೆಲ್ಲಿ!!!??ಇಂದೂ ಮಹಿಳೆಯರು ಹೊರಗೇ ಹೋದರೆ ಮತ್ತೇ ಸುರಕ್ಷಿತವಾಗಿ ಮನೆ ತಲಪುವರು ಎಂಬ ನಂಬಿಕೆ ಇಲ್ಲ ಎನ್ನುವ ಅನುಮಾನ ಶುರುವಾಗಿದೆ.

ನಾಗರಿಕ ಸಮಾಜದ ವಿವಿಧ ಭಾಗಗಳಲ್ಲಿ ದಿನಕ್ಕೊಂದು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಜಗತ್ತಿನಲ್ಲಿ ಯಾವುದೇ ಪ್ರಾಣಿಯು ತನ್ನ ಹಾಗೆಯೇ ಇರುವ ಪ್ರಾಣಿಯ ಕೊಂದ ಉದಾಹರಣೆಗಳು ಇಲ್ಲ.ಆದ್ರೆ ಮನುಷ್ಯನ ಈ ಹಿಂಸಾಚಾರ ಶೋಷಣೆಗೆ ಅವೆಷ್ಟು ಮುಗ್ದ ಜೀವಿಗಳು ಬಲಿ ಆಗಬೇಕು ಎಂಬ ಪ್ರಶ್ನೆ ಕಾಡುತ್ತಲೇ ಇದೆ.

ನಿರ್ಭಯ ಪ್ರಕರಣದಿಂದ ಇಲ್ಲಿನ ತನಕವೂ ಎಲ್ಲಾ ಬಗೆಯ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿರುವ ಸಾದ್ಯತೆ ಕಡಿಮೆ ಇದೆ. ಶಾಲಾ ಕಾಲೇಜುಗಳಲ್ಲಿ ನೌಕರಿ ಮಾಡುವಲ್ಲಿ ಅಷ್ಟೇ ಅಲ್ಲದೇ ತನ್ನದೇ ಮನೆಯಲ್ಲಿಯೇ ಮಾನಸಿಕವಾಗಿಯೂ ನೊಂದು ಸಹಿಸುವ ಅವೆಷ್ಟು ಮಹಿಳೆಯರು ಇರುವರು ನಾ ಕಾಣೆ.

ಸ್ತ್ರಿಯನ್ನು ದೇವತೆ ,ದೇವರೇ ಎಂದು ಕಾಣಬೇಡಿ. ನಿಮ್ಮಲ್ಲಿ ಒಬ್ಬಳಾಗಿರಳು ಅವಕಾಶ ನೀಡಬೇಕು ಎಂಬುದು ನನ್ನ ಕಳಕಳಿಯ ಪ್ರಾರ್ಥನೆ.
ಬುದ್ಧ ಬಸವಣ್ಣ ಮತ್ತು ನಮ್ಮ ದೇಶದ ಹಿರಿಮೆಯನ್ನು ಎತ್ತಿ ಹಿಡದ ಮಹಾತ್ಮರ ದೇಶದಲ್ಲಿ ಇಂಥಾ ಸ್ಥಿತಿ ನಿರ್ಮಾಣವಾಗಿದೆ.
ಸ್ತ್ರೀ ಭದ್ರತೆಯ ಭರವಸೆ ನೀಡುವ ಕುರಿತು ಚರ್ಚೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಹಾಗೂ ಅದರ ಜೊತೆಗೆ ಪ್ರಗತಿಪರ ಸಂಘಟನೆಗಳು ಮತ್ತು ಲೇಖಕರು ಮುಂದಾಗಬೇಕು ಎಂದು ಕಳಕಳಿಯ ಪ್ರಾರ್ಥನೆ ಸುವ್ಯವಸ್ಥೆ ಮತ್ತು ಸೌಹಾರ್ದತೆ ಸಮತಾ ಭಾವ ಇದ್ದಾಗಲೇ ಮಹಿಳೆಯರು ತಮ್ಮ ಸ್ವಂತ ಊರು ಮತ್ತು ಮನೆಗಳಲ್ಲಿ ಸುರಕ್ಷಿತವಾಗಿ ಇರಲು ಸಾಧ್ಯ ಎಂಬ ಕಾರಣಕ್ಕೆ ಪ್ರತಿಯೊಂದು ಹಂತದಲ್ಲೂ ಅವಳ ಗೌರವಿಸಿ. ದೇವತೆ ಮಾಡಬೇಡಿ ಬದಲಿಗೆ ನಿಮ್ಮಂತೆ ಕಾಣಿ ಎಂದು ಕೈ ಮುಗಿದು ಪ್ರತೀ 2 ವರುಷದ ಹೆಣ್ಣು ಮಗುವಿನಿಂದ 80 ವರುಷದ ಅಜ್ಜಿಯ ವರಿಗೂ ಇದ್ದ ಎಲ್ಲರೂ ಕೇಳುತ್ತೆವೆ.

ನಿಮ್ಮನ್ನು ಹೆತ್ತವಳು ಒಬ್ಬ ಮಹಿಳೆ.ಎಲ್ಲ ಓದುಗರಿಗೆ ಅನ್ವಯಿಸಿದ್ದು  ಸರಿಯೋ ಇಲ್ವೋ ಎನ್ನುವ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನೋವು ನಿರಾಸೆ ಹತಾಶೆಯ ಜೊತೆಗೆ ಲೇಖನಕೆ ಪೂರ್ಣ ವಿರಾಮ ಹಾಕುವೆ.

-ಕವಿತಾ ಮಳಗಿ

Comments