ಕೊಪ್ಪಳದಲ್ಲಿ ರಾಹುಲ್ ಗಾಂಧಿಗೆ ಕಪ್ಪು ಬಟ್ಟೆ ತೋರಿಸಿ ಪ್ರತಿಭಟನೆ
ಕೊಪ್ಪಳ: ಜನಾಶೀರ್ವಾದ ಯಾತ್ರೆಯಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಇಲ್ಲಿ ಕೆಲ ಸಂಘಟನೆಗಳಿಂದ ಪ್ರತಿಭಟನೆಗಳು ಎದುರಾದವು. ಸದಾಶಿವ ಆಯೋಗದ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ದಲಿತ ಸಂಘಟನೆಗಳು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದವು.
ಕುಷ್ಟಗಿಯಲ್ಲಿ ರಾಹುಲ್ ಗಾಂಧಿ ಇದ್ದ ಕಾರ್ಯಕ್ರಮದ ವೇದಿಕೆಯ ಸಮೀಪವೇ ಕಪ್ಪು ಬಟ್ಟೆ ಧರಿಸಿದ ಮಾದಿಗ ಸಮುದಾಯದ ಯುವಕರು ಘೋಷಣೆ ಕೂಗಿ ಪ್ರತಿಭಟನೆಗೆ ಯತ್ನಿಸಿದರು.
ಈ ವೇಳೆ ಸಿಎಂ ಸಿದ್ದರಾಮಯ್ಯ, ಡಾ. ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಕೆ.ಸಿ.ವೇಣುಗೋಪಾಲ್ ಮೊದಲಾದ ಹಲವು ನಾಯಕರು ವೇದಿಕೆಯಲ್ಲಿದ್ದರು. ಪ್ರತಿಭಟನಾಕಾರರನ್ನು ಪೊಲೀಸರು ಕೂಡಲೇ ವಶಕ್ಕೆ ಪಡೆದರು.