UK Suddi
The news is by your side.

ನನಗೆ ಸೇವೆ ಮಾಡಲು ಅವಕಾಶ ನೀಡಿ:ಜೆಡಿಎಸ್ ಅಭ್ಯರ್ಥಿ ಶಂಕರ್ ಮಾಡಲಗಿ.

ಬೈಲಹೊಂಗಲ:ಇಂದು ಬೈಲಹೊಂಗಲ ಮತಕ್ಷೇತ್ರದ ನಯಾನಗರದಲ್ಲಿ ಜ್ಯಾತ್ಯಾತೀತ ಜನತಾದಳ ಪಕ್ಷದ ಅಭ್ಯರ್ಥಿಯಾದ ಶಂಕರ ಮಾಡಲಗಿ ಅವರ ಚುನಾವಣಾ ಪ್ರಚಾರ ಕಾರ್ಯ ಆರಂಭ ಮಾಡಲಾಯಿತು ನಯಾನಗರದ ಶ್ರೀ ಸುಕಾನಂದ ಮಠದ ಆವರಣದಲ್ಲಿ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು.

ಇದೆ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವರು ಹಾಗೂ ಪಕ್ಷದ ಹಿರಿಯ ಮುಖಂಡರಾದ ಬಾಬಾಗೌಡ ಪಾಟೀಲ ಅವರು ಮಾತನಾಡಿ ರೈತರ ಹಾಗೂ ಯುವಕರ  ಅಭಿವೃದ್ಧಿ ಮಾಡಬೇಕಾದರೆ ಕುಮಾರಸ್ವಾಮಿ ಅವರ ಸರ್ಕಾರ ರಾಜ್ಯದಲ್ಲಿ ಬರಬೇಕು ಅದಕ್ಕಾಗಿ ಶಂಕರ ಮಾಡಲಗಿ ಅವರನ್ನು ಆರಿಸಿ ತಂದು ಕುಮಾರಸ್ವಾಮಿ ಕೈ ಬಲಪಡಿಸಬೇಕೇಂದು ಹೇಳಿದರು.

ಜೆಡಿಎಸ್ ಅಭ್ಯರ್ಥಿ ಶಂಕರ ಮಾಡಲಗಿ ಮಾತನಾಡಿ ನನಗೆ ಸೇವೆ ಮಾಡಲು ಅವಕಾಶ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.ಹಿರಿಯ ಮುಖಂಡರಾದ ಸೊಪ್ಪಿನಮಠ ವಕೀಲರು ಮಾತನಾಡಿದರು.

ಈ ಸಂದರ್ಭದಲ್ಲಿ ಪಕ್ಷದ ತಾಲೂಕಾ ಅಧ್ಯಕ್ಷರಾದ ದಾನಪ್ಪಗೌಡರ ಕುಸಲಾಪುರ ಪಕ್ಷದ ಮುಖಂಡರಾದ ಮಲ್ಲಿಕಾರ್ಜುನ ಹುಂಬಿ,ಬುಡರಕಟ್ಟಿ ಗ್ರಾ.ಪಂ.ಅಧ್ಯಕ್ಷರಾದ ಶಂಕರ್ ಮಂಗಲಗತ್ತಿ, ನಾಗಪ್ಪ ಬೊಳಶೆಟ್ಟಿ,ಶಿವಾನಂದ ಬೇಟಗೇರಿ, ಇಮಾಮಹುಸೇನ್ ಖುದ್ದುನಾಯ್ಕ,ಬಸವರಾಜ ಬಳಿಗಾರ, ಫಕೀರ ಕಡಕೋಳ ಹಾಗೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ತಾಲುಕಾ ಮಹಿಳಾ ಘಟಕದ ಅಧ್ಯಕ್ಷರಾಗಿ ಶ್ರೀಮತಿ ಶಾರದಾ ಈರಪ್ಪಾ ಮುತ್ನಾಳ ಅವರು ಅಧಿಕಾರ ವಹಿಸಿಕೊಂಡರು. 

Comments