ಫೇಸ್ಬುಕ್ಗೆ ಪೈಪೋಟಿ ನೀಡಲು ಬರುತ್ತಿದೆ ಗೂಗಲ್ ನ ಹೊಸ ಆ್ಯಪ್!
ಫೇಸ್ಬುಕ್ಗೆ ಸ್ಪರ್ಧೆ ನೀಡುವ ಸಲುವಾಗಿ ಗೂಗಲ್ ನೂತನ ನ್ಯೂಸ್ ಆ್ಯಪ್ ಒಂದನ್ನು ಬಿಡುಗಡೆಗೊಳಿಸಿದೆ. ಈ ಆ್ಯಪ್ನ ವಿಶೇಷತೆ ಏನೆಂದರೆ ಯಾರೇ ಒಬ್ಬ ವ್ಯಕ್ತಿಯು ತನ್ನ ಸುತ್ತಮುತ್ತಲು ನಡೆಯುವ ಘಟನೆಯನ್ನು ಫೋಸ್ಟ್ ಮಾಡಬಹುದು. ಅಂದರೆ ಇನ್ಮುಂದೆ ಫೇಸ್ಬುಕ್ ಪೋಸ್ಟ್ನಂತೆ ಬಳಕೆದಾರನೊಬ್ಬ ಈ ಆ್ಯಪ್ ಮೂಲಕ ಫೋಟೋ, ವಿಡಿಯೋ ಹಾಗೂ ಬರವಣಿಗೆಗಳನ್ನು ಅಪ್ಲೋಡ್ ಮಾಡಬಹುದಾಗಿದೆ.
ಗೂಗಲ್ ತನ್ನ ಈ ನೂತನ ಆ್ಯಪ್ಗೆ ‘ಬುಲೆಟಿನ್’ ಎಂದು ಹೆಸರು ನೀಡಿದೆ. ಗೂಗಲ್ನ ಈ ಆ್ಯಪ್ ಉಚಿತವಾಗಿದ್ದು, ಕಡಿಮೆ ಸ್ಪೇಸ್ ಸಅಕಾಗುತ್ತದೆ. ಅಲ್ಲದೇ ಸ್ಲೋ ಇಂಟರ್ನೆಟ್ ಇದ್ದರೂ ಯಅವುದೇ ತೊಡಕಿಲ್ಲದೆ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಈ ಮೂಲಕ ಬಳಕೆದಾರರು ತಮ್ಮ ಸುತ್ತಮುತ್ತ ನಡೆಯುವ ಘಟನೆಗಳ ಫೋಟೋ, ವಿಡಿಯೋಗಳನ್ನು ಶೇರ್ ಮಾಡಬಹುದಾಗಿದೆ. ಗೂಗಲ್ ಈ ಆ್ಯಪ್ ಮೂಲಕ ಸೋಷಲ್ ಮೀಡಿಯಾ ದಿಗ್ಗಜ ಫೇಸ್ಬುಕ್ಗೆ ಬಹುದೊಡ್ಡ ಸವಾಲು ನೀಡಲು ಮುಂದಾಗಿದೆ.
ಈವರೆಗೂ ಬಳಕೆದಾರರು ಸೋಷಲ್ ಪ್ಲಾಟ್ಫಾರ್ಮ್ಗಳಲ್ಲಿ ಫೇಸ್ಬುಕ್ನ್ನೇ ಅವಲಂಭಿಸಿದ್ದರು. ಆದರೀಗ ಗೂಗಲ್ನ ಈ ಆ್ಯಪ್ ಫೇಸ್ಬುಕ್ಗೆ ಭಾರೀ ಪೈಪೋಟಿ ನೀಡಲಿದೆ ಎಂದು ಹೇಳಲಾಗುತ್ತಿದೆ.
ಗೂಗಲ್ ತನ್ನ ಈ ಆ್ಯಪ್ನ್ನು ಭಾರತದಲ್ಲಿ ಇನ್ನೂ ಬಿಡುಗಡೆಗೊಳಿಸಿಲ್ಲ. ಆದರೆ ಅತಿ ಶೀಘ್ರದಲ್ಲಿ ಕಂಪೆನಿಯು ಭಅರತದಲ್ಲೂ ಇದನ್ನು ಬಿಡುಗಡೆಗೊಳಿಸಲಿದೆ ಎಂದು ತಿಳಿದು ಬಂದಿದೆ.