ಶ್ರೀ ರಾಚಯ್ಯ ಮುತ್ಯಾನವರ ಪುಣ್ಯಸ್ಮರಣೆ.
ಮುದ್ದೇಬಿಹಾಳ : ಶರಣರ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಇಂದು ಎಲ್ಲರಿಂದಲೂ ನಡೆಯಬೇಕಿದೆ ಎಂದು ಯುವ ಧುರೀಣ ರಕ್ಷೀತ್ ವರ್ತೂರ್ ಹೇಳಿದರು.
ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಶನಿವಾರ ಶ್ರೀ ರಾಚಯ್ಯ ಮುತ್ಯಾನವರ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾತ್ರಾ ಮಹೋತ್ಸವದಲ್ಲಿ ಧರ್ಮಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ನುಡಿದಂತೆ ನಡೆದವರು ಶರಣರು.ಅವರ ಜೀವನಾದರ್ಶಗಳು ಇತರರಿಗೆ ಮಾದರಿಯಾಗಿದ್ದು ತತ್ವ ಮತ್ತು ಆದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು. ಜಿಪಂ ಸದಸ್ಯ ಬಸನಗೌಡ ವಣಕ್ಯಾಳ,ವಕೀಲ ಎನ್.ಆರ್.ಮೋಕಾಶಿ ಮಾತನಾಡಿದರು.ಪಡದಯ್ಯ ರಾಚಯ್ಯ ಮಠ ಸಾನಿದ್ಯ ವಹಿಸಿದ್ದರು, ವೀರಯ್ಯಶಾಸ್ತ್ರೀ ವಸ್ತ್ರದ,ಕರವೀರೇಶ್ವರ ಮಠದ ರುದ್ರಮುನಿ ಶ್ರೀಗಳು ಆಶೀರ್ವಚನ ನೀಡಿದರು. ಬಿಜೆಪಿ ಮುಖಂಡರಾದ ಮಲಕೇಂದ್ರಗೌಡ ಬಿರಾದಾರ, ಶಿವಶಂಕರಗೌಡ ಹೀರೆಗೌಡರ, ಎಪಿಎಂಸಿ ಅಧ್ಯಕ್ಷ ಗುರು ತಾರನಾಳ, ಗ್ರಾಪಂ ಅಧ್ಯಕ್ಷೆ ಮಹಾದೇವಿ ಗಡ್ಡಿ,ಉಪಾದ್ಯಕ್ಷೆ ಗೌರಮ್ಮ ಆರೇಶಂಕರ,ಎಂ.ಬಿ.ಹುಲಗಣ್ಣಿ,ಎಂ.ಎಸ್