UK Suddi
The news is by your side.

ಮಹಾ ಶಿವರಾತ್ರಿ:ಮತದಾರರಲ್ಲಿ ಜಾಗೃತಿ.

ಧಾರವಾಡ: ಮಹಾಶಿವರಾತ್ರಿ ಪ್ರಯುಕ್ತ ಮತದಾರರಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನು ಜಿಲ್ಲಾ ಸ್ವೀಪ್ ಸಮಿತಿಯು ಮಂಗಳವಾರ ಸಂಜೆ ಇಲ್ಲಿನ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಚಟುವಟಿಕೆಗಳನ್ನು ನಡೆಸಿತು. 
ಭಾರತವು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ.ದೇಶದ ಜನಸಾಮಾನ್ಯರ ಸಾರ್ವಭೌಮತೆಯನ್ನು ಎತ್ತಿ ಹಿಡಿಯಲು 18 ವರ್ಷ ತುಂಬಿದ ಎಲ್ಲರೂ ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಿಕೊಳ್ಳಬೇಕು.ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂಬ ಸಂದೇಶಗಳನ್ನು ಕರಪತ್ರ ಹಾಘೂ ಭಿತ್ತಿಪತ್ರಗಳ ಮೂಲಕ ಸಾರಲಾಯಿತು. 

ಸ್ವಾಮಿ ವಿವೇಕಾನಂದ ಹೆಲ್ಪಿಂಗ್ ಹ್ಯಾಂಡ್ಸ್ ಸಮಾಜ ಸಂಸ್ಥೆಯು ಸಾರ್ವಜನಿಕರಿಗೆ ಬೆಲ್ಲ,ಶುದ್ಧ ಕುಡಿಯುವ ನೀರಿನ ವಿತರಣೆ ಜೊತೆಗೆ ಮತದಾನ ಜಾಗೃತಿ ಕಾರ್ಯವನ್ನೂ ಸಹ ನಡೆಸಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಸಿಬ್ಬಂದಿ ಸಿ.ಬಿ.ಬೋವಿ ,ಸ್ವಾಮಿ ವಿವೇಕಾನಂದ ಸಂಸ್ಥೆಯ ರಾಮಚಂದ್ರ ಗೊರನಕೊಳ್ಳ,ಸಂತೋಷ ಕಟಿಗಿ,ಮಂಜುನಾಥ ಗವಾಡಿ, ಭರಮಗೌಡ ಹಿರೇಗೌಡ್ರ ಮತ್ತಿತರರು ಉಪಸ್ಥಿತರಿದ್ದರು.

Comments