ರಾಹುಲ್ ಗಾಂಧಿ ಮಾತಿಗೆ ಪ್ರತ್ಯುತ್ತರ ನೀಡಿದ: ಸಂಸದ ಪ್ರಹ್ಲಾದ್ ಜೋಶಿ.
ಧಾರವಾಡ: ರಾಯಚೂರಿನಲ್ಲಿ ಮೊನ್ನೆ ನಡೆದ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರು, ಹಿಂಬದಿ ಕನ್ನಡಿ ನೋಡಿ ಗಾಡಿ ಓಡಿಸುತ್ತಾರೆ. ಹೀಗೆ ಗಾಡಿ ಓಡಿಸುತ್ತಾ ಹೋದರೆ ಖಂಡಿತ ಅಪಘಾತ ಆಗುತ್ತದೆ ಎಂದು ಮೋದಿಯವರು ಕಾಂಗ್ರೆಸ್ ಹಿನ್ನೆಲೆಯನ್ನು ಕೆದಕಿ ಮಾತನಾಡಿದ್ದರು. ಇದಕ್ಕೆ ಸಂಸದ ಪ್ರಹ್ಲಾದ ಜೋಶಿ ಅವರು ಅತಿ ಸೂಕ್ಷ್ಮವಾಗಿ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಪ್ರಧಾನಿ ಮೋದಿಯವರ ಗಾಡಿ ಭರ್ಜರಿ ಸ್ಪೀಡನಲ್ಲಿದೆ.ಮೋದಿ ಅವರು ಜಾಗರೂಕತೆಯಿಂದ ಗಾಡಿ ಓಡಿಸುತ್ತಿದ್ದಾರೆ. ಆದರೆ, ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ನಡೆಸುವಾಗ ಹಿಂದೆ ಮುಂದೆಯು ಸಹ ನೋಡುತ್ತಿರಲಿಲ್ಲ. ಅವರ ಗಾಡಿ ನಿಂತಲ್ಲೇ ನಿಲ್ಲುತಿತ್ತು. ಗಾಡಿ ನಿಲ್ಲಿಸಿಕೊಂಡೇ ಎಕ್ಸಿಲೇಟರ್ ಹಾಕುತಿದ್ದರು ಎಂದು ಲೇವಡಿ ಮಾಡಿದರು..
ರಾಹುಲ್ ಗಾಂಧಿಯವರು ಇಲ್ಲಿಗೆ ಬಂದು ಎಷ್ಟು ಪ್ರಚಾರ ಮಾಡುತ್ತಾರೋ ಅಷ್ಟು ನಮ್ಮ ಪಕ್ಷಕ್ಕೆ ಒಳ್ಳೆಯದು. ಏಕೆಂದರೆ ಅವರ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸುವದಿಲ್ಲ.ಆದರೆ ದೇಶದ ಪ್ರಧಾನಿಯೊಬ್ಬರ ಬಗ್ಗೆ ಮಾತನಾಡುವಾಗ ತಾವು ಮಾತನಾಡುವ ಮಾತಿನ ಮೇಲೆ ಹಿಡಿತವಿರಬೇಕು ಎಂದರು.