UK Suddi
The news is by your side.

ಲಕ್ಷ್ಮಿ ಹೆಬ್ಬಾಳಕರ ಹುಟ್ಟು ಹಬ್ಬ:ಎಂಟು ಸಾವಿರ ಯೋಧರ ಸನ್ಮಾನ.

ಬೆಳಗಾವಿ:ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ಅವರು,ಇದೇ ಮೊದಲ ಬಾರಿಗೆ ತಮ್ಮ ಹುಟ್ಟು ಹಬ್ಬವನ್ನು ಬಹಿರಂಗವಾಗಿ ಆಚರಿಸಿಕೊಳ್ಳಲು ಮುಂದಾಗಿದ್ದಾರೆ. 

ಹುಟ್ಟು ಹಬ್ಬದ ಪ್ರಯುಕ್ತವಾಗಿ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ 8 ಸಾವಿರ ಯೋಧರ ಕುಟುಂಬಸ್ಥರನ್ನು ಸನ್ಮಾನಿಸಲಿದ್ದಾರೆ.ಅದಕ್ಕಾಗಿ ನಗರದ ಸಿಪಿಎಡ್ ಮೈದಾನದಲ್ಲಿ ಬ್ರಹತ್ ವೇದಿಕೆ ಸಜ್ಜಾಗಿದೆ.

ಇಂದು ಸಂಜೆ 4 ಘಂಟೆಗೆ ಜನ್ಮದಿನಾಚರಣೆ ನಡೆಯಲಿದ್ದು,ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರ ಕೂಡ ನಡೆಯಲಿದೆ.ಶಿಬಿರದಲ್ಲಿ ಎರಡು ಸಾವಿರಕ್ಕೂ ಅಧಿಕ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ತಮ್ಮ ಹೆಸರನ್ನು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ.ಜೊತೆಗೇ ಐವರು ರೈತರನ್ನು ಸಾಂಕೇತಿಕವಾಗಿ ಸನ್ಮಾನ ಮಾಡಲಿದ್ದಾರೆ.

Comments