ಹಿಂದೂ ಸನಾತನ ಧರ್ಮಕ್ಕೆ ಶ್ರೇಷ್ಠರಾತ್ರಿ ಎನ್ನುವ ಹೆಗ್ಗಳಿಕೆ ಮಹಾಶಿವರಾತ್ರಿದ್ದು:ಡಾ.ರವಿ ಪಾಟೀಲ.
ಬೆಳಗಾವಿ: ಸಮಸ್ತ ಹಿಂದೂ ಸನಾತನ ಧರ್ಮಕ್ಕೆ ಶ್ರೇಷ್ಠರಾತ್ರಿ ಎನ್ನುವ ಹೆಗ್ಗಳಿಕೆ ಮಹಾಶಿವರಾತ್ರಿದ್ದು ಎಂದು ಬಿಜೆಪಿ ಮುಖಂಡ ಡಾ. ರವಿ ಪಾಟೀಲ ಹೇಳಿದರು.
ಮಂಗಳವಾರ ಮಹಾಶಿವರಾತ್ರಿ ಅಂಗವಾಗಿ ರಾಮತೀರ್ಥ ನಗರದಲ್ಲಿ ಶಿವಭಕ್ತರಿಗೆ 50 ಸಾವಿರ ವಿಭೂತಿ, ರುದ್ರಾಕ್ಷಿ ಹಾಗೂ ಗಂಗಾಜಲ ವಿತರಿಸಿ ಮಾತನಾಡಿದರು.
ಮಹಾಶಿವಾರಾತ್ರಿಯನ್ನು ಭಕ್ತರು ಉಪವಾಸ, ಜಾಗರಣೆ, ಶಿವ ಸ್ಮರಣೆ, ಪೂಜಾಭಿಷೇಕ ಸೇರಿದಂತೆ ಮೊದಲಾದ ವೃತಾಚಾರಣೆಯಿಂದ ಆಚರಿಸುತ್ತಾರೆ. ಶಿವನಿಗೆ ಪ್ರೀಯವೆಂದರೆ ತ್ರೀದಳ ಪಥ್ರಿಯನ್ನು ಶಿವನ ಮೂಡಿಗೆರಿಸಿದರೆ ಶಿವ ಪ್ರಸನ್ನನಾಗುತ್ತಾನೆ ಎನ್ನುವುದು ಹಿಂದೂಗಳ ನಂಬಿಕೆಯಾಗಿದೆ. ತ್ರೀಪುಂಡ ಶಿವ ವಿಭೂತಿ ಪ್ರೀಯನೂ ಆಗಿದ್ದಾನೆ ಎಂದು ಹೇಳಿದರು.