UK Suddi
The news is by your side.

ಆಯುರ್ವೇದ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ:ಡಾ. ಎಸ್.ಕೆ.ಬನ್ನಿಗೋಳ.

ಬೆಳಗಾವಿ: ಆಯುರ್ವೇದ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಆಯುರ್ವೇದದ ಶಕ್ತಿಯನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವ ಕೆಲಸ ಆಯುರ್ವೇದ ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿಗಳು ಮಾಡಬೇಕೆಂದು ಡಾ.ಎಸ್‌.ಕೆ. ಬನ್ನಿಗೋಳ ಹೇಳಿದರು.
ಅವರು ಸೋಮವಾರದಂದು ಜಿಲ್ಲೆಯ ಘಟಪ್ರಭಾ ಜೆ.ಜಿ ಆಸ್ಪತ್ರೆಯ ಆಯುರ್ವೇದಿಕ ಮೆಡಿಕಲ್‌ ಕಾಲೇಜಿಗೆ ಶಲ್ಯತಂತ್ರ ಪಿಎಚ್‌ಡಿ ಪದವಿಗೆ ಅನುಮತಿ ದೊರೆತ ನಿಮಿತ್ಯ ಹಮ್ಮಿಕೊಂಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರೂಡಿಯಲ್ಲಿ ಹೇಳುವಂತೆ ನೀನು ಮುಟ್ಟದ್ದೆಲ್ಲಾ ಬಂಗಾರವಾಗಬೇಕಾದರೆ ನೀನು ಬಂಗಾರವನ್ನೇ ಮುಟ್ಟು. ಅದರಂತೆ ನಿಮಗೆ ಬಯಸಿದ್ದೆಲ್ಲಾ ಸಿಗಬೇಕಾದರೆ ಸಿಗುವಂತಹದನ್ನೆ ಬಯಸು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಕಾಲೇಜಿಗೆ ಶಲ್ಯತಂತ್ರ ಪಿಎಚ್‌ಡಿ ಪದವಿ ದೊರೆತಿದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇವರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಜೆ.ಜಿ. ಆಸ್ಪತ್ರೆಯ ಮುಖ್ಯ ವೈಧ್ಯಾಧಿಕಾರಿ ಡಾ. ಬಿ.ಕೆ.ಎಚ್‌ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪರವಾಗಿ ಡಾ.ಎಸ್‌.ಕೆ. ಬನ್ನಿಗೋಳ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಬಿ.ಆರ್‌.ಪಾಟೀಲ, ನಿರ್ದೇಶಕರಾದ ಬಿ.ಎಚ್‌. ಇನಾಮದಾರ, ಆಯ್‌.ಆಯ್‌.ನೇರ್ಲಿ, ಎ.ಎಸ್‌.ಬಡಕುಂದ್ರಿ, ಸಿ.ಎ.ಕಾಡದವರ, ಸಿ.ಎಸ್‌.ಬಣಕಾರ, ಆರ್‌.ಟಿ.ಶಿರಾಳಕರ, ಆಶಾದೇವಿ ಕತ್ತಿ, ಆಯುರ್ವೇದಿಕ ಕಾಲೇಜಿನ ಪ್ರಾಂಶುಪಾಲ ಜೆ.ಕೆ.ಶರ್ಮಾ, ಮ್ಯಾನೆಜರ್‌ ಎಲ್‌.ಎಸ್‌.ಹಿಡಕಲ್‌ ಸೇರಿದಂತೆ ಶಿಕ್ಷಕ ಸಿಬ್ಬಂದಿ ವರ್ಗದವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Comments