UK Suddi
The news is by your side.

ಬಂಜಾರ ಸಮಾಜದ ಜನರು ಶ್ರಮಜೀವಿಗಳು:ಕೆ ಎಂ ಹಾಲಪ್ಪ.

ಹೊಸಪೇಟೆ:ಬಂಜಾರ ಸಮುದಾಯ ಜನರು ಶ್ರಮಜೀವಿಗಳು, ಬಂಜಾರ ಸಮಾಜದ ಹಿಂದುಳಿದ ಸಮಾಜದ ಎನ್ನುವ ಹಣೆಪಟ್ಟಿ ಹೊಂದಿದ್ದು, ಇದನ್ನು ಕಿತ್ತು ಒಗೆಯುವ ಕೆಲಸ ಸಮಾಜದ ಯುವಕರು ಮಾಡಬೇಕಿದೆ ಎಂದು ಕೆಪೆಕ್ ಉಪಾಧ್ಯಕ್ಷ ಕೆ.ಎಂ.ಹಾಲಪ್ಪ ಹೇಳಿದರು.

ಸ್ಥಳೀಯ ತಾಲೂಕು ಆಡಳಿತ ಹಾಗೂ ಬಂಜಾರ ಸಮಾಜದ ವತಿಯಿಂದ ನಗರದ ಬಂಜಾರ್ ಹಿಲ್ಸ್‍ನಲ್ಲಿ ನಡೆದ ಸಂತ ಶ್ರೀ ಸೇವಾಲಾಲ ಮಹಾರಾಜರ 279ನೇ ಜಯಂತಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಶರಣರು ಸಂತರು ದಾಸರು ಯಾವ ಜನಾಂಗಕ್ಕು ಸೇರಿದವರಲ್ಲ.ಯಾವದೇ ಮಾತ ಬೇಧ ಮಾಡದೆ ಒಗಟ್ಟಿನಿಂದ ಆಚರಿಸಬೇಕು. ನಿಷ್ಢರು, ಪ್ರಮಾಣಿಕರು ಈ ಸಮಾಜದವರಾಗಿದ್ದಾರೆ. ಸಂತ ಸೇವಾಲಾಲïರು ಸಮಾಜದ ಅಭಿವೃದ್ಧಿಗಾಗಿ ಹಾಗೂ ಅನಿಷ್ಠ ಪದ್ದತ್ತಿಯ ಜಾಗೃತಿಗಾಗಿ ಹಲವು ರಾಜ್ಯಗಳಿಗೆ ಸಂಚರಿಸಿದ್ದಾರೆ.ಸಂತ ಸೇವಾಲಾಲರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ.ಸಮಾಜದ ಏಳಿಗೆಗೆ ಪ್ರತಿಯೊ ಬ್ಬರು ಶ್ರಮಿಸಬೇಕಿದೆ. ಶೈಕ್ಷಣಿಕ, ಆರ್ಥಿಕ, ರಾಜಕೀಯ, ಸಾಮಾಜಿಕವಾಗಿ ಬಂಜಾರ ಸಮಾಜ ಬಲಗೊಳ್ಳಬೇಕಿದೆ ಎಂದರು.

ಗ್ರೇಡ್2 ತಹಸೀಲ್ದಾರ್ ರೇಣುಕಮ್ಮ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಮಾಜಿ ಶಾಸಕ ರತನ್ ಸಿಂಗ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಮಾಮ ನಿಯಾಜಿ, ಜೆಡಿಎಸ್ ತಾಲೂಕು ಅಧ್ಯಕ್ಷ ಶಫಿ ಬರಕಾತಿ, ಉಪನ್ಯಾಸಕ ಗೋವಿಂದ ನಾಯ್ಕ್, ಸಮಾಜದ ಮುಖಂಡರಾದ ನೀಲಾಬಾಯಿ, ಕೃಷ್ಣ ನಾಯ್ಕ, ಕೆ.ಪಿ.ನಾಯಕ್, ಗಂಗನಾಯ್ಕ, ವೇಗನಾಯ್ಕ, ಪ್ರೀತಂ ಕುಮಾರ್ ನಾಯ್ಕ, ಡಿ.ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.

ವರದಿ:ಮಂಜುನಾಥ ಅಯ್ಯಸ್ವಾಮಿ

Comments