UK Suddi
The news is by your side.

ಬುಡರಕಟ್ಟಿ: ಫೆ.17,18ರಂದು ಸ್ವಾಮಿ ವಿವೇಕಾನಂದ ಅವಾಡ್ರ್ಸ

ಬೆಳಗಾವಿ: ದೊಡವಾಡ ಸಮೀಪದ ಬುಡರಕಟ್ಟಿಯ ಸ್ವಾಮಿ ವಿವೇಕಾನಂದ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವದ ನಿಮಿತ್ತ ಫೆ.17, 18ರಂದು ಸಂಜೆ 5ಗಂಟೆಗೆ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ, 2018ನೇ ಸಾಲಿನ ಸ್ವಾಮಿ ವಿವೇಕಾನಂದ ಅವಾಡ್ರ್ಸ ವಿತರಣೆ, ನಗೆಹಬ್ಬ ಹಾಗೂ ಸಂಗೀತ ಸಂಜೆ ಕಾರ್ಯಕ್ರಮಗಳು ನಡೆಯಲಿವೆ.

ಫೆ.17ರಂದು ನಡೆಯುವ ಕಾರ್ಯಕ್ರಮದಲ್ಲಿ ಬೈಲಹೊಂಗಲ ಶಾಖಾ ಮೂರು ಸಾವಿರ ಮಠದ ಪ್ರಭು ನೀಲಕಂಠ ಸ್ವಾಮಿಜಿ ಸಾನಿಧ್ಯ ವಹಿಸುವರು. ಮಹಾಂತಯ್ಯ ಶಾಸ್ತ್ರಿ ಆರಾದ್ರಿಮಠ ಸಮ್ಮುಖ ಮತ್ತು ಮಡಿವಾಳೇಶ್ವರ ಮಠದ ಚಂದ್ರಶೇಖರ ಸ್ವಾಮಿಜಿ ನೇತೃತ್ವ ವಹಿಸುವರು. ಸಂಸದ ಸುರೇಶ ಅಂಗಡಿ ಕಾರ್ಯಕ್ರಮ ಉದ್ಘಾಟಿಸಲಿದ್ದು ಶಾಸಕ ಡಾ.ವಿಶ್ವನಾಥ ಪಾಟೀಲ ಅಧ್ಯಕ್ಷತೆ ವಹಿಸುವರು. ಪ್ರಮುಖರಾದ ಅಮೃತ ದೇಸಾಯಿ,ಬಾಬಾಸಹೇಬ ಪಾಟೀಲ,ಸಿ ಕೆ ಮೆಕ್ಕೇದ,ಮಡಿವಾಳಪ್ಪ ಹೋಟಿ,ಮಹಾಂತೇಶ ತುರಮರಿ,ಸೋಮನಾಥ ಸೊಪ್ಪಿಮಠ,ರಾಜು ಸೊಗಲ,ರಫೀಕ ಬಡೇಘರ ಮುಂತಾದವರು ಪಾಲ್ಗೊಳ್ಳುವರು.

ಫೆ.18ರಂದು ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮಿಜಿ, ಬೈಲಹೊಂಗಲ ಪ್ರಭು ನೀಲಕಂಠ ಸ್ವಾಮಿಜಿ ಸಾನಿಧ್ಯ ವಹಿಸುವರು. ಬೇವಿನಕೊಪ್ಪ ಆನಂದಾಶ್ರಮದ ವಿಜಯಾನಂದ ಸ್ವಾಮಿಜಿ,ಚಂದ್ರಶೇಖರ ಸ್ವಾಮಿಜಿ ಸಮ್ಮುಖ ನೇತೃತ್ವ ವಹಿಸುವರು. ಹಾರೋಗೇರಿ ಹೆಸ್ಕಾಂ ಅಧಿಕಾರಿ ಲಿಂಗನಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದು ಹಿರಿಯ ಪತ್ರಕರ್ತ ಈಶ್ವರ ಹೋಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

2018ರ ಸ್ವಾಮಿ ವಿವೇಕಾನಂದ ಅವಾಡ್ರ್ಸ ಪುರಸ್ಕøತರಾದ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ,ಶಾಸಕ ಡಾ.ವಿಶ್ವನಾಥ ಪಾಟೀಲ,ಜಿಪಂ ಸದಸ್ಯೆ ರೋಹಿಣಿ ಪಾಟೀಲ,ಮಹಾಂತೇಶ ದೊಡಗೌಡ್ರ,ಆನಂದ ಚೋಪ್ರಾ,ವೀರೇಶ ಹೊಳೆಪ್ಪನವರ,ಡಾ.ಸಿ ಬಿ ಗಣಾಚಾರಿ ಭಾಗವಹಿಸಲಿದ್ದು ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಬೈಲಹೊಂಗಲ ಪುರಸಭೆ ಅಧ್ಯಕ್ಷ ರಾಜಶೇಖರ ಮೂಗಿ,ನಟ ಶಿವರಂಜನ್ ಬೋಳನ್ನವರ ಮುಂತಾದ ಗಣ್ಯರು ಪಾಲಗೊಳ್ಳಲಿದ್ದಾರೆಂದು ಸಂಸ್ಥೆ ಅಧ್ಯಕ್ಷ ಸಿದ್ದಾರೂಢ ಹೊಂಡಪ್ಪನವರ ತಿಳಿಸಿದ್ದಾರೆ.

Comments