ವೀರಶೈವ ಲಿಂಗಾಯತ ಧರ್ಮ ಸನಾತನ ಧರ್ಮವಾಗಿದೆ:ಶಾಸಕ ಆನಂದ ಮಾಮನಿ
ಸವದತ್ತಿ: ವೀರಶೈವ ಲಿಂಗಾಯತ ಧರ್ಮ ಸನಾತನ ಧರ್ಮವಾಗಿದೆ, ಇಂತಹ ಧರ್ಮವನ್ನು ಒಡಿಯಲು ಧರ್ಮಕ್ಕೆ ಸಂಬಂಧವಿಲ್ಲದ ವ್ಯಕ್ತಿಗಳು ನಮ್ಮ ತಾಲೂಕಿನಲ್ಲಿ ಧರ್ಮವನ್ನು ಒಡಿಯಲು ಬೆಂಬಲಿಸುತ್ತಿದ್ದಾರೆ. ಅಂತಹ ವ್ಯಕ್ತಿಗಳು ನಮ್ಮ ಜಾತಿ, ಕುಲ, ಗೋತ್ರದವರೇ ಅಲ್ಲ ಎಂದು ಶಾಸಕ ಆನಂದ ಮಾಮನಿ ಹೇಳಿದರು.
ತಾಲೂಕಿನ ಶಿರಸಂಗಿಯ ಬಜಾರ ಗಲ್ಲಿಯಲ್ಲಿರುವ ಬಸವೇಶ್ವರ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. 10 ವರ್ಷಗಳಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದೆನೆ. ಅಖಂಡ ಕರ್ನಾಟಕ, ಅಖಂಡ ಬೆಳಗಾವಿ, ವೀರಶೈವ ಲಿಂಗಾಯತ ಧರ್ಮ ಎಂದಿಗೂ ವಿಭಜನೆ ಆಗಬರದೆಂದು ನಾನು ಹಲವಾರು ಬಾರಿ ಹೇಳಿದ್ದೆನೆ ಎಂದರು. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಡಿವಾಳಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ತಾಪಂ.ಸದಸ್ಯ ಮಹಾರಾಜ ಕಣವಿ, ಚನ್ನಬಸಪ್ಪ ಪಟ್ಟೇದ, ಶೇಖಪ್ಪ ತೊರಗಲ್, ಶಂಕ್ರಪ್ಪ ಹತ್ತಿ, ಎಸ್.ಎಚ್. ಶಿಂಧೆ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.