UK Suddi
The news is by your side.

ಸಂತ ಸೇವಾಲಾಲ ಮಹಾರಾಜರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ.

ಧಾರವಾಡ:ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಲಕರ್ಣಿ ಅವರು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಆರಂಭಗೊಂಡ ಸಂತ ಸೇವಾಲಾಲ ಮಹಾರಾಜರ ಭಾವಚಿತ್ರ ಮೆರವಣಿಗೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. 

ಮೆರವಣಿಗೆಯೂ ಕಲಾ ತಂಡ ಹಾಗೂ ಲಂಬಾಣಿ ನೃತ್ಯದೊಂದಿಗೆ ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ, ವೇದಿಕೆ ಕಾರ್ಯಕ್ರಮದ ಕಲಾಭವನಕ್ಕೆ ಬಂದು ತಲುಪಿತು. 

ಈ ಸಂದರ್ಭದಲ್ಲಿ ಪಾಂಡುರಂಗ ಪಮ್ಮಾರ, ಪಿ.ಎಸ್.ರಜಪೂತ, ಜಯಸಿಂಗ ನಾಯಕ, ಡಾ.ಮುಕುಂದ ಲಮಾಣಿ, ಡಾ.ರವಿ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 

Comments