ಅಥಣಿಯಿಂದ ಶ್ರವಣಬೆಳಗೋಳ ಮಹಾಮಸ್ತಕಾಭಿಷೆಕಕ್ಕೆ 80 ಬಸ್ ಕಲ್ಪಿಸಿದ ಶಾಸಕ ಲಕ್ಷ್ಮಣ ಸವದಿ.
ಅಥಣಿ:ಫೆ.17ರಿಂದ 25ರ ವರೆಗೆ ನಡೆಯಲಿರುವ ವಿಶ್ವ ವಿಖ್ಯಾತ ಶ್ರವಣಬೆಳಗೋಳದ ಬಾಹುಬಲಿ ಮೂರ್ತಿಗೆ ಶತಮಾನದ ಎರಡನೇ ಮಹಾಮಸ್ತಕಾಭಿಷೆಕ ನಡೆಯಲಿದೆ.
ಮಹಾಮಸ್ತಕಾಭಿಷೇಕದ ಪ್ರಯುಕ್ತವಾಗಿ ಶ್ರವಣಬೆಳಗೋಳಕ್ಕೆ ತೆರಳಿರುವ ಅಥಣಿ ಹಾಗು ಚಿಕ್ಕೋಡಿ ತಾಲೂಕಿನ ಜನತೆಗೆ 80 ಬಸ್ಸುಗಳನ್ನು ಕಲ್ಪಿಸಿ,ಯಾತ್ರಾ ಬಸ್ಸುಗಳಿಗೆ ಶಾಸಕರಾದ ಲಕ್ಷ್ಮಣ ಸವದಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ತೆರಳುವ ಅಥಣಿ ಹಾಗು ಚಿಕ್ಕೋಡಿ ತಾಲೂಕಿನ ಭಕ್ತಾದಿಗಳಿಗೆ,ಜೈನ್ ಸಮಾಜದ ಶ್ರಾವಕ ಶ್ರಾವಕಿಯರ ಪ್ರಯಾಣ ಸುಖಕರ ಆಗಿರಲಿ ಎಂದು ಹಾರೈಸಿದರು.