ಕಾಂಗ್ರೆಸ್ಸ್ ಪಕ್ಷದ ವಿರುದ್ದ ಹಗುರವಾಗಿ ಮಾತನಾಡುವದು ಸರಿಯಲ್ಲ:ಸರತಾಜ ಬೀಳಗಿ
ವಿಜಯಪುರ: ಕೇಂದ್ರ ಸಚಿವ ರಮೇಶ ಜಿಗಜಿಣಗಿಯವರು ಇತ್ತೀಚಿಗೆ ಆಲಮೇಲದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಕುರಿತು ಹಗುರವಾಗಿ ಮಾತನಾಡಿದ್ದನ್ನು ಸರಿಯಲ್ಲ, ಮಾತನಾಡುವು ಮೊದಲು ಪ್ರಜ್ಞಾವಂತರಾಗಿ ಮಾತನಾಡಬೇಕು ಎಂದು ಬೆಳಗಾವಿ ವಲಯದ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಸರತಾಜ ಎಂ.ಬೀಳಗಿ ಹೇಳಿದರು.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು, ಜಿಗಜಿಣಗಿ ಅವರಿಗೆ ಕಾಂಗ್ರೆಸ್ ಪಕ್ಷದ ಕುರಿತು ಮಾತನಾಡುವ ನೈತಿಕತೆ ಇಲ್ಲ. ಮೊದಲು ಅವರು ತಾವು ಮೀಸಲಾತಿಯಿಂದ ಆರಿಸಿ ಬಂದಿದ್ದಾರೆ ಎನ್ನುವುದೇ ಮರೆತಂತಿದೆ. ಅವರು ಆಯ್ಕೆಯಾದ ಬಂದ ನಂತರ ಇಲ್ಲಿಯವರೆಗೂ ದಲಿತಕೇರಿಗೆ ಎಷ್ಟು ಭಾರಿ ಹೋಗಿಬಂದಿದ್ದಾರೆ. ಅದರಂತೆ ಅವರು ದತ್ತಕ್ಕೆ ತೆಗೆದುಕೊಂಡ ಗ್ರಾಮವನ್ನು ಎಷ್ಟರ ಮಟ್ಟಿಗೆ ಅಭಿವೃದ್ಧಿಮಾಡಿದ್ದಾರೆ ಎಂಬುದನ್ನು ಮೊದಲು ಬಹಿರಂಗಗೊಳಿಸಲಿ ಎಂದು ಸವಾಲು ಹಾಕಿದ್ದಾರೆ.
ಅಂಬೇಡ್ಕರ್ ಅವರ ಕುರಿತು ಮಾತನಾಡುವ ಸಚಿವರು ಮೊದಲಿಗೆ ತಮ್ಮ ಪಕ್ಷದ ಸಂಸದ ಅಂನತಕುಮಾರ ಹೆಗಡೆ ಅವರು ಸಭೆ, ಸಮಾರಂಭಗಳಲ್ಲಿ ಹುಚ್ಚರ ಹಾಗೆ ಹೇಳಿಕೆ ನೀಡುತ್ತಿದ್ದಾರೆ. ಮೊದಲಿಗೆ ಅವರ ಹೊಲಸು ನಾಲಿಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಹೇಳಿ ಎಂದು ಜಿಗಜಿಣಗಿ ವಿರುದ್ಧ ಕಿಡಿಕಾರಿದರು.
ವಿಶ್ವದ ಮೆಚ್ಚುಗೆ ಪಡೆದ ನಮ್ಮ ಭಾರತದ ಸಂವಿಧಾನವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಅಂಬೇಡ್ಕರ್ ಅವರು ಬರೆದ ಸಂವಿಧಾನದ ಕುರಿತು ಅವಿವೇಕಿಯಂತೆ ಅಸಡ್ಡೆ ಹೇಳಿಕೆಯನ್ನು ನೀಡುತ್ತಿದ್ದಾರೆ. ಮೊದಲು ನಿಮ್ಮ ನೀತಿ ಪಾಠವನ್ನು ಬಿಜೆಪಿ ಪಕ್ಷದಲ್ಲಿನ ಅನಂತಕುಮಾರ ಹೆಗಡೆ ಅವರಿಗೆ ತಿಳಿಸಿರಿ ಎಂದರು.