UK Suddi
The news is by your side.

ಬುನಾದಿ ಇರದ ಸುಳ್ಳಿನ ಸೌಧವನ್ನು ಕಟ್ಟುವ ಮೂಲಕ ಬಜೆಟ್ ಮಂಡಿಸಿದ್ದಾರೆ:ಈರೇಶ್ ಅಂಚಟಗೇರಿ.

ಧಾರವಾಡ:ಮುಖ್ಯಮಂತ್ರಿ ಸಿದ್ದರಾಮಯ್ಯನವರ 2018 ರ ಬಜೆಟ್ (ಪ್ಲಾಪ) ಒಂದು ಒಡೆದ ಬಲೂನ. ಹಿಂದಿನ 4 ವರ್ಷಗಳ ಬಜೆಟನಲ್ಲಿ ಘೋಷಿಸಿದ ಯೋಜನೆಗಳ ಪೈಕಿ ಶೇ 10% ರಷ್ಟೂ ಯೋಜನೆಗಳನ್ನು ಕಾರ್ಯರೂಪಕ್ಕೆ ತರದ ಸಿದ್ದರಾಮಯ್ಯನವರು ಇಂದು ಬುನಾದಿ ಇರದ ಸುಳ್ಳಿನ ಸೌಧವನ್ನು ಕಟ್ಟುವ ಮೂಲಕ ಬಜೆಟ್ ಮಂಡಿಸಿದ್ದಾರೆ. ಇದು ಕರ್ನಾಟಕದ 6 ಕೋಟಿ ಜನರ ಕಣ್ಣೊರೆಸುವ ತಂತ್ರ, ತಮ್ಮದೇ ಊಹಾಲೋಕದ ಯಾವುದೇ ಕನಿಷ್ಠ ಧ್ಯಾನ ಇರದ ಅಧಿಕಾರಿಯು ಇಂತಹ ಬಜೆಟ್ ಅಂಕಿ ಅಂಶಗಳನ್ನು ಮಾಡುವ ಸಾಧ್ಯವಿಲ್ಲ ಅಂತಹ ಬಜೆಟನ್ನು ಸಿದ್ದರಾಮಯ್ಯನವರು ಮಂಡಿಸಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಜನತೆಗೆ ಯಾವುದೇ ವಿಶೇಷ ಕೊಡಿಗೆ ನೀಡದ ಸಿದ್ದರಾಮಯ್ಯ ಈ ಬಜೆಟ್ ಕಾಂಗ್ರೆಸ್ ನ ಕೊನೆಯ ಬಜೆಟ್ ಆಗಿದೆ’ ಎಂದು ಬಿಜೆಪಿ ಸ್ಲಂ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಈರೇಶ ಅಂಚಟಗೇರಿ ಹೇಳಿದ್ದಾರೆ

Comments