ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬೇಟಿ ಹಿನ್ನೆಲೆ:ಬೀಳಗಿಯಲ್ಲಿ ಪೂರ್ವಭಾವಿ ಸಭೆ.
ಬೀಳಗಿ:ಎ.ಐ.ಸಿ.ಸಿ. ಅಧ್ಯಕ್ಷರಾದ ರಾಹುಲ ಗಾಂಧಿಯವರ ಬಾಗಲಕೋಟ ಜಿಲ್ಲೆಯ ಬೀಳಗಿ ನಗರಕ್ಕೆ ಶೀಘ್ರದಲ್ಲೇ ಬೇಟಿ ನೀಡಲಿದ್ದಾರೆ.ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಜನಾಶಿರ್ವಾದ ಯಾತ್ರೆ ನಡೆಯಲಿದೆ. ಅದರಂಗವಾಗಿ ಬೀಳಗಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಪೂರ್ವ ಭಾವಿ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎಸ್ ಆರ್ ಪಾಟೀಲರು ಭಾಗವಹಿಸಿ ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೇರಿ ಕಾರ್ಯಕ್ರಮವನ್ನು ಸಕಲ ರೀತಿಯಿಂದ ಯಶಸ್ವಿ ಗೊಳಿಸಲು ಕರೆ ನೀಡಿದರು.
ಈ ವೇಳೆ ಹಾಜರಿದ್ದ ಪಕ್ಷದ ಹಿರಿಯರು, ಜನಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳ ಜತೆ ಸಮಾವೇಶದ ಕುರಿತು ಚರ್ಚಿಸಿ ರೂಪು ರೇಷೆಗಳನ್ನು ಹಾಕಿಕೊಳ್ಳಲಾಯಿತು.