UK Suddi
The news is by your side.

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಮಹಾಂತೇಶ ಹೊಂಗಲ ಕಿವಿಮಾತು

ದೊಡವಾಡ: ಅನುಭವಿ ವಿಷಯ ತಜ್ಞ ಶಿಕ್ಷಕರು ನೀಡುವ ಪರೀಕ್ಷಾ ಮಾರ್ಗಸೂಚಿಗಳನ್ನು ಶ್ರದ್ಧೆಯಿಂದ ಪಾಲಿಸುವುದರ ಮೂಲಕ 10ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷಾಭಯವನ್ನು ಹತ್ತಿರ ಬರಗೊಡದೆ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರಬೇಕೆಂದು ಗೋವನಕೊಪ್ಪ ಎಸ್‍ಸಿಎಚ್ ಫೌಂಡೇಷನ್ ಅಧ್ಯಕ್ಷ ಮಹಾಂತೇಶ ಹೊಂಗಲ ಹೇಳಿದರು.

ಸಮೀಪದ ಚಿಕ್ಕಬೆಳ್ಳಿಕಟ್ಟಿಯ ಎಂ ಎಂ ಆನಿಕಿವಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್‍ಸಿಎಚ್ ಫೌಂಡೇಷನ್ ವತಿಯಿಂದ ದೊಡವಾಡ, ಬುಡರಕಟ್ಟಿ, ಗುಡಿಕಟ್ಟಿ, ಗೋವನಕೊಪ್ಪ ಗ್ರಾಮಗಳ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ನಿವಾರಿಸುವ ಉದ್ದೇಶದಿಂದ ಏರ್ಪಡಿಸಲಾಗಿದ್ದ “ಹತ್ತರ ಭಯ ಹತ್ತಿರ ಬೇಡ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ವಹಿಸಿದ್ದ ಮುಖ್ಯಾಧ್ಯಾಪಕ ಯು ಎಲ್ ಕರ್ಚಗಟ್ಟಿ  ಮಾತನಾಡಿ ಪರೀಕ್ಷೆ ಬೇಕು ಫಜೀತಿ ಬೇಡ ಎಂಬ ಭಾವನೆಯಿಂದ ವಿದ್ಯಾರ್ಥಿಗಳು ಅಧ್ಯಯನದಲ್ಲಿ ತೊಡಗಬೇಕು ಎಂದ ಅವರು ಸಾಂದರ್ಭಿಕ ಹಾಸ್ಯ ಚಟಾಕಿ ಹೇಳಿ ವಿದ್ಯಾರ್ಥಿಗಳನ್ನು ರಂಜಿಸಿದರು.

ರಾಜ್ಯ ವಿಷಯ ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜ ಕರೀಕಟ್ಟಿ,ಆರ್ ಡಿ ಹಿರೇಮಠ, ಪ್ರವೀಣಕುಮಾರ ಗುಜ್ಜರರವರು ಇಂಗ್ಲೀಷ, ಗಣಿತ,ವಿಜ್ಞಾನ ವಿಷಯಗಳ ಕುರಿತು ವಿದ್ಯಾರ್ಥಿಗಳ ಮನಮುಟ್ಟುವಂತೆ ಬೋಧಿಸಿ ಸವಿಸ್ತಾರ ಮಾಹಿತಿ ನೀಡಿದರು. ಶಿಕ್ಷಕರಾದ ಎಂ ಸಿ ಸಂಗೊಳ್ಳಿ,ಆರ್ ವಾಯ್ ಜೇಡರ,ಯು ಎಸ್ ಹೂಗಾರ,ಕೆ ಬಿ ಕಡೇಮನಿ, ವಿ.ಯು ಹಿರೇಕೊಪ್ಪ ಸಿ ಎಸ್ ಸೊಬರದ, ಎಮ್ ಬಿ ಹಾರೋಬಿಡಿ ಇನ್ನಿತರರು ಉಪಸ್ಥಿತರಿದ್ದರು. ಸಂಪನ್ಮೂಲ ಅಧಿಕಾರಿ ರಾಜು ಹಕ್ಕಿ ನಿರೂಪಿಸಿ ವಂದಿಸಿದರು.

 

Comments