UK Suddi
The news is by your side.

ಕಾರ್ಯಕರ್ತರ ಮನೆಯ ಗೋಡೆಯ ಮೇಲಿನ ಬಿಜೆಪಿ ಚಿಹ್ನೆ ಅಳಿಸಿ ಹಾಕಲು ಯತ್ನ

ಬಾಗಲಕೋಟ: ಬಿಜೆಪಿ ಕಾರ್ಯಕರ್ತರ ಮನೆಯ ಗೋಡೆಯ ಮೇಲೆ ಬರೆದ ಪಕ್ಷದ ಚಿಹ್ನೆಗೆ ಸುಣ್ಣ ಬಡೆದು ಅಳಿಸಿ ಹಾಕಲು ಪ್ರಯತ್ನಿಸಿದ ಕೃತ್ಯ ನಡೆದ ಘಟನೆ ಬೆಳಕಿಗೆ ಬಂದಿದೆ.

ಬಾಗಲಕೋಟ ಬಿಜೆಪಿಯಿಂದ ಗೋಡೆ ಮೇಲೆ ಬಿಜೆಪಿ ಪಕ್ಷದ ರಾಷ್ಟಿಯ ಚಿಹ್ನೆಯಾದ ಕಮಲದ ಹೂ ಮತ್ತು ಸ್ಲೋಗನನ್ನು ಬಿಜೆಪಿ ಕಾರ್ಯಕರ್ತರ ಮನೆಯ ಮೇಲೆ ಬರೆಯಲಾಗಿತ್ತು .

ಬಿಜೆಪಿ ಪಕ್ಷದ ಸಂಘಯನೆಯನ್ನು ಸಹಿಸದ ಸ್ಥಳಿಯ ಶಾಸಕರು ಪೌರಾಯುಕ್ತರ ಮೂಲಕ ಗೋಡೆ ಬರಹದ ಮೇಲೆ ಸುಣ್ಣ ಬಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದು ರಾಷ್ಟ್ರಿಯ ಪಕ್ಷದ ಚಿಹ್ನೆಯನ್ನು ಅಳಸಿ ಹಾಕುತ್ತಿರುವ ಕಾಂಗ್ರೇಸ್ ಶಾಸಕರು ಮತ್ತು ಶಾಸಕರ ಕೈಗೊಂಬೆಯಾದ ಸರ್ಕಾರಿ ಅಧಿಕಾರಿಗಳ ವಿರುದ್ದ ಬಾಗಲಕೋಟ ಮತಕ್ಷೇತ್ರದ ನಗರ ಮಂಡಲ ಅಧ್ಯಕ್ಷರು ರಾಜು ವ್ಹಿ ನಾಯ್ಕರ ನೇತೃತ್ವದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments