UK Suddi
The news is by your side.

ಸೀರೆಯುಟ್ಟು ಹಂಪಿ ವೀಕ್ಷಿಸಿದ ಚೀನಾ ಪ್ರವಾಸಿಗರು.

ಹೊಸಪೇಟ:ಜಗತ್ತ ಪ್ರಸಿದ್ದ ಹಂಪಿಗೆ ಬರುವ ಬಹುತೇಕ ವಿದೇಶಿಗರು ತುಂಡುಡುಗೆ ತೊಟ್ಟುಕೊಂಡೇ ಹಂಪಿ ಸುತ್ತಾಡುವುದು ಸರ್ವೇ ಸಾಮಾನ್ಯ. ಆದರೆ, ಚೀನಾ ದೇಶದ ಈ ಪ್ರವಾಸಿಗರು ಅಪ್ಪಟ ಭಾರತೀಯರಂತೆ ಸೀರೆಯುಟ್ಟು, ಹಂಪಿ ವೀಕ್ಷಿಸಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತು.
ಕೆಲ ದಿನಗಳ ಹಿಂದೆ ಭಾರತಕ್ಕೆ ಬಂದಿಳಿದ ಈ ಚೀನಾ ದೇಶದ ಪ್ರವಾಸಿಗಳು ದೇಶದ ಹಲವುಕಡೆ ಪ್ರವಾಸ ಮುಗಿಸಿ. ನಂತರ ಅವರು ಹಂಪಿಯ ಶಿಲ್ಪ ಕಲಾ ಸ್ಮಾರಕಗಳನ್ನು ನೋಡಲು ಬಯಸಿದ್ದರು.ಹಂಪಿಯನ್ನು ಸೀರೆ ಉಟ್ಟುಕೊಂಡೇ ನೋಡಲು ಬಯಸಿದ್ದಾರೆ. ಅವರು ವಿವಿಧ ರೀತಿಯ ಸೀರೆಗಳನ್ನು ಉಟ್ಟು ಅಪ್ಪಟ ಭಾರತೀಯರಂತೆ ಇಲ್ಲಿನ ಸ್ಮಾರಕಗಳನ್ನು ವೀಕ್ಷಿಸಿದರು. ಸೀರೆಯುಟ್ಟು ಬಳಕುತ್ತ ನಡೆಯುತ್ತಿದ್ದರೇ ದೇಶಿ ಪ್ರವಾಸಿಗರು ಅವರನ್ನು ಕುತೂಹಲದಿಂದ ವೀಕ್ಷಿಸಿದರು.
ಒಂದು ದಿನಪೂರ್ತಿ ಸೀರೆಯುಟ್ಟು ಸ್ಮಾರಕಗಳನ್ನು ವೀಕ್ಷಿಸಿದರೆ, ಮತ್ತೊಂದು ದಿನ ಚೂಡಿದಾರ್, ಲಂಗ ಚೋಲಿ ದೇಶಿಯ ವಿವಿಧ ರೀತಿಯ ತೊಟ್ಟು ಸುತ್ತಾಡಿದರು. ಭಾರತಕ್ಕೆ ಬಂದ ಮೇಲೆ ಭಾರತಿಯರ ಪ್ರದೇಶಿಕ ಬಟ್ಟೆಗಳನ್ನು ತೊಟ್ಟು ಅಲ್ಲಿ ಪ್ರಮುಖ ಪ್ರವಾಸಿ ಸ್ಥಳಗಳನ್ನು ನೋಡಿದ್ದಾರೆ.
ಸೀರೆಯುಟ್ಟು ನಡೆದಾಡುವುದು ಮೊದಲಿಗೆ ಒಂದಿಷ್ಟು ಸಮಸ್ಯೆಯಾಗಿತ್ತು. ಆದರೆ, ನಂತರ ಸರಿಹೋಯ್ತು. ಒಂದು ರೀತಿ ಇದರಿಂದ ಮಜಾ ಅನುಭವಿಸಿದೆವು. ಇಲೇವೆನ್ ಸ್ಟೇಂಗ್ ಸೀರೆ ಧರಿಸಿದ ಬಗ್ಗೆ ಸಂತಸ ಹಂಚಿಕೊಂಡರು. 
ನಮಗೆ ಭಾರತದ ಸಂಪ್ರದಾಯ ತುಂಬ ಇಷ್ಠವಾಗಿದೆ. ಇನ್ನುಬ್ಬರ ಮಾನಸಿಕ ಧಕ್ಕೆಯಾಗದಂತೆ ಇಲ್ಲಿಯ ವೇಶಭೂಷಣಗಳಿವೆ. ನಮ್ಮ ದೇಶದಲ್ಲಿ ಹೀಗೆ ಇರಲು ಪ್ರಯತ್ನಿಸುತ್ತೆವೆ. ವಿಶ್ವದಲ್ಲೆ ಸಂಸ್ಕøತಿ ಸಂಪ್ರದಾಯ ಇನ್ನೂ ಭಾರತದಲ್ಲಿ ಹೀಗೆ ಉಳಿದಿದೆ. ಇನ್ನು ಹೆಚ್ಚಾಗಿ ಇಲ್ಲಿಯ ಪರಿಸರ ಇಷ್ಟವಾಗಿದೆ ಎಂದು ನೇಕ್ಷ್ , ಕೋಕೊ, ಚೀನಾ ದೇಶ ಪ್ರವಾಸಿಗರು ಹೇಳಿದರು.

ವರದಿ:ಮಂಜುನಾಥ್ ಅಯ್ಯಸ್ವಾಮಿ

Comments