UK Suddi
The news is by your side.

ಗವಿಯಪ್ಪಗೆ ‘ಜೈ’ ಎಂದ ನೇಕಾರರು.

ಹೋಸಪೇಟೆ:ನಗರದ ನೇಕಾರ ಕಾಲೋನಿಯ ನೇಕಾರ ಸಮುದಾಯದವರು ಇಂದು ಬಿಜೆಪಿ ಅಭ್ಯರ್ಥಿ ಗವಿಯಪ್ಪ ಅವರನ್ನು ನೇಕಾರ ಕಾಲೋನಿಗೆ ಆಹ್ವಾನಿಸಿದ್ದಾರೆ.

ನೇಕಾರ ಕಾಲೋನಿಯ ಬಿಜೆಪಿ ಬೂತ್ ಮಟ್ಟದ ಕಾರ್ಯಕ್ರಮದಲ್ಲಿ ‘ನಿಮ್ಮೊಂದಿಗೆ ನಾವಿದ್ದೀವಿ’ ಎನ್ನುವ ಮೂಲಕ ನೇಕಾರ ಸಮುದಾಯದವರು ಆಡಳಿತ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ.ಇಲ್ಲಿನ ಹಾಲಿ ಶಾಸಕ ರಾಜೀನಾಮೆ ಸಲ್ಲಿಸಿದ ಆನಂದ್ ಸಿಂಗ್ ಪಕ್ಷಾಂತರದಿಂದ ಬೇಸತ್ತ ಇಲ್ಲಿನ ನೇಕಾರರು ಬಿಜೆಪಿ ಅಭ್ಯರ್ಥಿ ಗವಿಯಪ್ಪರನ್ನು ಆಹ್ವಾನಿಸಿ ಸನ್ಮಾಸಿದ್ದಾರೆ.

ಬಳ್ಳಾರಿ ಜಿಲ್ಲಾ ನೇಕಾರ ವಲಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ. ನೇಕಾರ ಮತಗಳನ್ನು ಕಾಯ್ದಡುವ ಹಿರಿಅಣ್ಣ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯನವರು ನೇಕಾರರನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳುವ ಓಲೈಕೆಯತ್ತ ಎಲ್ಲರ ಚಿತ್ತ ನೆಟ್ಟಿದೆ.

Comments