UK Suddi
The news is by your side.

ಸ್ಯಾನಿಟರಿ ಪ್ಯಾಡ್ ಬದಲು ಕಾಟನ್ ಬಟ್ಟೆ ಪ್ಯಾಡ್ ಬಳಸುವುದು ಉತ್ತಮ:ಡಾ. ಸಂಜೀವ್ ಕುಲಕರ್ಣಿ

ಧಾರವಾಡ: ಮಹಿಳೆಯರು ಮುಟ್ಟಿನ ನಿರ್ವಹಣೆಗೆ ಪ್ಲಾಸ್ಟಿಕ್ ಸ್ಯಾನಿಟರಿ ಪ್ಯಾಡ್ ಬದಲು ಕಾಟನ್ ಬಟ್ಟೆ ಪ್ಯಾಡ್ ಬಳಸುವುದು ಉತ್ತಮ. ಮುಟ್ಟಿನ ಬಗ್ಗೆ ಮಹಿಳೆಯರೆಲ್ಲರೂ ಸೂಕ್ತ ತಿಳಿವಳಿಕೆ ಹೊಂದುವುದು ಅವಶ್ಯಕವಾಗಿದೆ ಎಂದು ಡಾ.ಸಂಜೀವ ಕುಲಕರ್ಣಿ ಅವರು ಹೇಳಿದರು.

ನಗರದ ಮಲ್ಲಿಕಾರ್ಜುನ ಮನಸೂರ ಕಲಾ ಭವನದಲ್ಲಿ ನಿನ್ನೆ ಸಾಯಂಕಾಲ ಜಿಲ್ಲಾ ಪಂಚಾಯತ, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ “ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳಾ ಪೌರಕಾರ್ಮಿಕರಿಗೆ  ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಮುಟ್ಟಿನ ಆರೋಗ್ಯ ಮತ್ತು ಸುರಕ್ಷಿತ ಮುಟ್ಟಿನ ಅಭ್ಯಾಸ ಕ್ರಮಗಳು” ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸಂಪ್ರದಾಯದ ಪ್ರಕಾರ ಮುಟ್ಟಿನ ಬಗ್ಗೆ ಇದ್ದ ಹಲವಾರು ತೊಂದರೆಗಳನ್ನು ಮಹಿಳೆಯರು ಪರಿಹರಿಸಿಕೊಳ್ಳಲು ವೈದ್ಯರ ಸಲಹೆ ಪಡೆಯುವಲ್ಲಿ ಮುಂದಾಗಬೇಕು. ಪ್ರಜ್ಞಾವಂತ ಹಾಗೂ ಜಾಗೃತ ಮಹಿಳೆಯರು ಮುಟ್ಟಿಗೆ ಪರ್ಯಾಯ ಉಪಾಯಗಳನ್ನು  ಹಾಗೂ ಮುಟ್ಟಿನಿಂದ ಹರಡುವ ರೋಗಗಳ ಕುರಿತು ತಿಳಿದುಕೊಳ್ಳಬೇಕು. ಅಂಗವಿಕಲರಿಗೆ ಕಾಟನ್ ಬಟ್ಟೆ ಪ್ಯಾಡ್ ನಿರ್ವಹಣೆ ಮಾಡುವಂತೆ ಪ್ರೊತ್ಸಾಹಿಸುವುದು ಅವಶ್ಯ ಎಂದರು.

ಕಾಟನ್ ಬಟ್ಟೆ ಪ್ಯಾಡ ತಯಾರಿಕೆಯಲ್ಲಿ ಯಾವುದೇ ರೀತಿಯ ರಸಾಯನಿಕ ವಸ್ತುಗಳನ್ನು ಬಳಸಿರುವುದಿಲ್ಲ. ಹೀಗಾಗಿ ಕಾಟನ್ ಬಟ್ಟೆ ಪ್ಯಾಡ್ ಬಳಸುವುದರಿಂದ ಯಾವುದೆ ರೀತಿಯಾದ ಅಡ್ಡ ಪರಿಣಾಮಗಳು ಇರುವುದಿಲ್ಲ. ಈ ಪ್ಯಾಡಗಳನ್ನು ಪುರ್ನಬಳಕೆ ಮಾಡಬಹುದಾಗಿದ್ದು, ಅದು ದೀರ್ಘಕಾಲ ಬಾಳಿಕೆ ಬರುತ್ತದೆ. ಮುಟ್ಟಿನ  ವಿಷಯದಲ್ಲಿ ತೊಂದರಿ ಇದ್ದರೆ ಹಿಂಜರಿಕೆ ಪಡದೆ ನೇರವಾಗಿ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸ್ತ್ರೀ ರೋಗ ತಜ್ಞ ವೈದ್ಯರಾದ ಡಾ. ಗಿರೀಜಾ ಪಾಟೀಲ ಅವರು ಮಾತನಾಡಿ, ಮುಟ್ಟಿನ ಸಮಯದಲ್ಲಿ ಸರಿಯಾದ ನಿರ್ವಹಣೆ ಮಾಡುವುದು ಮಹಿಳೆಯರಿಗೆ ಒಂದು ದೊಡ್ಡ ಸಮಸ್ಯೆಯಾಗಿದ್ದು, ಅದನ್ನು ತೊದರೆ ಎಂದು ಭಾವಿಸದೆ ಪ್ರತಿಯೊಬ್ಬ ಮಹಿಳೆಯು, ಅದು ತನ್ನ ಹೆಣ್ಣತನದ ಸೌಭಾಗ್ಯವೆಂದು ಪರಿಗಣಿಸಬೇಕು ಎಂದು ಹೇಳಿದರು.
ಕಾರ್ಯಗಾರದಲ್ಲಿ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ ಮಿಷನ್ ಸಂಯೋಜಕರಾದ ಪದ್ಮಾವತಿ ಎನ್,   ಡಾ.ಸೀಮಾ, ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಎಮ್.ಬಿ.ಸಣ್ಣೆÃರ, ವಿವಿಧ ಹಾಸ್ಟೆಲ್‌ಗಳ ವಾರ್ಡನ್‌ಗಳು ಹಾಗೂ ವಿದ್ಯಾರ್ಥಿನೀಯರು, ಪೌರಕಾರ್ಮಿಕ ಮಹಿಳೆಯರು ಪಾಲ್ಗೊಂಡಿದ್ದರು.

Comments