ಹಂಪಿ ಸ್ಮಾರಕಗಳನ್ನು ಕಣ್ತುಂಬಿಕೊಂಡ ಬಾಲಿವುಡ್ ಜೋಡಿ..
ಹೊಸಪೇಟೆ:ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ಸೋದರಳಿಯ, ನಾಯಕ ನಟ ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಅವಂತಿಕಾ ಮಲಿಕ್ ಜೊತೆ ವಿಶ್ವವಿಖ್ಯಾತ ಹಂಪಿಯ ವಿಶೇಷ ಸ್ಮಾರಕಗಳನ್ನು ಶುಕ್ರವಾರ ಕಣ್ತುಂಬಿಕೊಂಡರು.
ದಂಪತಿ ಕಮಲಾಪುರದ ಖಾಸಗಿ ಹೋಟೆಲನಲ್ಲಿ ಎರಡು ದಿನಗಳ ಕಾಲ ವಾಸ್ತವ್ಯ ಹೂಡಿ ಯಾರು ಗುರುತಿಸದಂತೆ ತೆಲೆಗೊಂದು ಟೋಪಿ ಧರಿಸಿ ಸಾಮಾನ್ಯರಂತೆ ವಿಶ್ವ ವಿಖ್ಯಾತ ಹಂಪಿಯ ವಿರೂಪಾಕ್ಷಸ್ವಾಮಿ ದೇವಸ್ಥಾನ, ಕಡಲೆಕಾಳು ಗಣೇಶ, ಸಾಸಿವೆ ಕಾಳು ಗಣೇಶ, ಕೃಷ್ಣ ದೇವಸ್ಥಾನ, ಬಡವಿಲಿಂಗ, ಉಗ್ರ ನರಸಿಂಹ, ನೆಲಸ್ಥರ ಶಿವಾಲಯ, ಅರಮನೆ ಆವರಣ, ಕಮಲಮಹಲ, ಗಜಶಾಲೆ, ಹಜಾರ ರಾಮ ದೇವಸ್ಥಾನ, ಮಹಾನವಮಿ ದಿಬ್ಬ, ಕಪ್ಪುಕಲ್ಲಿನ ಪುಷ್ಕರಣಿ, ರಾಣಿಸ್ನಾನ ಗೃಹ, ವಿಜಯವಿಠ್ಠಲ ದೇವಸ್ಥಾನ ಹಾಗೂ ಹೇಮಕೂಟ ಸೇರಿದಂತೆ ಅಪರೂಪದ ಸ್ಮರಕಗಳನ್ನು ವೀಕ್ಷಿಸಿದರು.
ಬಾಲಿವುಡ್ ನಟ್ ಇಮ್ರಾನ್ ಖಾನ್ ಹಿಂದಿಯ ಕಟ್ಟಿ ಬಟ್ಟಿ, ಗೋರಿತೇರಿ ಪ್ಯಾರ್ ಮೈನೆ, ಜಾನೆ ತು ಜಾನೆ ನಾ, ಮೇರಿ ಬ್ರದರ್ ಕಿ ದುಲ್ಹನ್, ಡಿಲ್ಲಿ ಬೆಲ್ಲಿ, ಐಹೇಟï ಲವ್ಸ್ಟೋರಿ, ಎಕ್ ಮೈನೆ ಐರ್ ಎಕ್ ತೂ, ಬ್ರೇಕೆ ಬಾದ್ ಇಪ್ಪತ್ತಕ್ಕೂ ಅಧಿಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಮುಂದಿನ ಚಿತ್ರದ ಲೊಕೇಷನ್ಗಾಗಿ ಹಂಪಿಯನ್ನು ನೋಡುತ್ತಿದ್ದಿರಾ ಎಂದು ಪತ್ರಕರ್ತರೊಂದಿಗೆ ಮಾತನಾಡಿ, ಸದ್ಯ ರಜೆ ಇರುವುದರಿಂದ ಹಂಪಿಯ ಪ್ರವಾಸ ಕೈಗೊಂಡಿರುವೆನು. ಮುಂದಿನ ದಿನಗಳಲ್ಲಿ ಚಿತ್ರದ ನಿರ್ದೇಶನ ಮಾಡಬೇಕೆಂಬುದು ನನ್ನ ಆಸೆ ಎಂದರು. ಹಂಪಿಯು ಅತ್ಯಂತ ಸುಂದರವಾದ ಸ್ಥಳವಾಗಿದೆ.ಎರಡು ದಿನಗಳ ಕಾಲ ಹಂಪಿಯನ್ನು ಸುತ್ತಿದ್ದು ಗೊತ್ತಾಗಲೇ ಇಲ್ಲಾ ಎಂದರು.
ವರದಿ:ಮಂಜುನಾಥ ಅಯ್ಯಸ್ವಾಮಿ