ವರದಕ್ಷಿಣೆ ಕಿರುಕುಳ:ವಿವಾಹಿತೆಯ ಸಾವು.
ಹೊಸಪೇಟೆ:ನಗರದ ಚಪ್ಪರದಳ್ಳಿಯ ವಿವಾಹಿತೆಯೊಬ್ಬರು ಶನಿವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದು, ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಪತಿ ಮನೆ ವಿರುದ್ಧ ಯಾಶ್ಮೀನ್ (26) ಮೃತಳ ತಂದೆ ರಾಮತುಲ್ಲಾಸಾಬ್ ದೂರು ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೌಗೊಳ್ಳುವಂತೆ 6 ಜನರ ಮೇಲೆ ನಗರದ ಬಡಾವಣೆ ಪೋಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಿಸಿದ್ಧಾರೆ.
ಮೂರು ವರ್ಷದ ಹಿಂದೆಯಷ್ಟೆ ತಾಲೂಕಿನ ಮರಿಯಮ್ಮನಹಳ್ಳಿಯ ತಂದೆ ರಾಮತುಲ್ಲಾಸಾಬ್ ಅವರ ಪುತ್ರಿ ಯಾಶ್ಮೀನ್(26) ನಗರದ ಲೇಟ್ ಮೆಹಬೂಬ್ ಸಾಬ್ರ ಎಂಬುವವರ ಪುತ್ರ ಆಸೀಪಗೆ ಮೂರು ವರ್ಷದ ಹಿಂದೆ ವಿವಾಹ ಮಾಡಿಕೊಡಲಾಯಿತು. ಮಗಳಿಗೆ 10 ತಿಂಗಳಿನ ಮಗು ಇದೆ. ಆಸೀಪತಾಲೂಕಿನ ಮರಿಯಮ್ಮನ ಹಳ್ಳಿಯ ಸಮೀಪದ ಎಸ್ಎಲ್ಆರ್ ಕಂಪನಿಯ ಸಿನಿಯರ್ ಇಂಜಿನಿಯರಾಗಿ ಕೆಲಸ ಮಾಡುತ್ತಾನೆ. ನಗರ ಚಪ್ಪರದಳ್ಳಿಯ 3ನೇ ಕ್ರಾಸ್ನ ಮನೆಯಲ್ಲಿ ಆಸೀಪ್ನ ಮನೆಯವರು ಸೀರೆಯಿಂದ ನೇಣುಹಾಕಿ ಸಾಯಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಮದುವೆಯಲ್ಲಿ ಹಿರಿಯ ಸಮ್ಮುಖದಲ್ಲಿ ಒಬ್ಬಳೆ ಮಗಳು ಎಂದು ಆಸೀಪ್ಗೆ1.5ಲಕ್ಷ ರೂ. 3.5 ತೊಲೆ ಬಂಗಾರ ನೀಡಿದ್ದೆವೆ. ಬಟ್ಟೆಗಾಗಿ 25 ಸಾವಿರ ರೂ. ಮದುವೆ ನಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಯಾಸ್ಮೀನ್ ತಿಳಿಸಿದ್ದಾಗ 45 ಸಾವಿರ ರೂ. ಕೊಟ್ಟಿದ್ದೆವೆ. ಮನೆಯ ಅಂಗಡಿ ರಿಪೇರಿ ಎಂದು 80 ಸಾವಿರ ಕೇಳಿದ್ದ. ಅದರಲ್ಲಿ 60 ಸಾವಿರ ರೂ. ಮತ್ತೆ ಒಂದು ತೊಲೆ ಬಂಗಾರ, ಮೂರು ತಿಂಗಳಿಂದ ಸಾಂಸರದ ವಿಷಯದಲ್ಲಿ ವಿನಾಕಾರಣ ಕಿರುಕುಳ ನೀಡಿ 50 ಸಾವಿರ ರೂ. ತರಲು ಹೇಳಿ ಮನೆ ಕಳಿಸಿದ್ದ. ಫೆ.12ರಂದು ಮತ್ತೆ ಗಂಡನ ಮನೆಗೆ ಕಳುಹಿಸಿದೆ. ಆದರೆ ಅವರ ಮನೆಯವರು ಮನೆಯಲ್ಲಿ ಸೇರಿಸದೇ ಇದ್ದರಿಂದ ಮತ್ತೆ 50 ಸಾವಿರ ರೂ. ನಿಡಿದ್ದೆವೆ. ಆದರು ನನ್ನ ಮಗಳಿಗೆ ಸಾಯಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿ, ಆಸೀಪನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ಎಂದು ಬಡಾವಣೆ ಪೋಲೀಸ್ ಠಾಣೆ ಪಿಎಸ್ಐ ತತಿಳಿಸಿದ್ದಾರೆ.
ವರದಿ:ಮಂಜುನಾಥ ಅಯ್ಯಸ್ವಾಮಿ