UK Suddi
The news is by your side.

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ರಂಗೋಲಿ ಸ್ಪರ್ದೆ.

ಬೆಳಗಾವಿ:ಛತ್ರಪತಿ ಶಿವಾಜಿ ಮಹಾರಾಜರ 391ನೇ ಜಯಂತಿ ಅಂಗವಾಗಿ ಶ್ರೀಮತಿ ಲಕ್ಷ್ಮಿತಾಯಿ ಪೌಂಡೇಶನ್ ವತಿಯಿಂದ ಬೆಳಗಾವಿ ಗ್ರಾಮೀಣ ವ್ಯಾಪ್ತಿಯಲ್ಲಿ ಬರುವ ಬೆಳಗುಂದಿ, ಸೋನೋಳಿ, ರಕ್ಕಸಕೊಪ್ಪ ಹಾಗೂ ಎಳಬೇಲ ಗ್ರಾಮಗಳಲ್ಲಿ ರಂಗೋಲಿಯ ರಂಗಿನ ಸ್ಪರ್ದೆ ಏರ್ಪಡಿಸಲಾಗಿತ್ತು.

ಶಿವಾಜಿ ಮಹಾರಾಜರ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲಕ ರಂಗೋಲಿ ಸ್ಪರ್ಧೆಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಲಕ್ಷ್ಮಿ ಹೆಬ್ಬಾಳಕರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳಕರ ಅವರು “ಎಲ್ಲ ಗ್ರಾಮಗಳ ಸಹೋದರಿಯರು, ತಾಯಂದಿರು ಗ್ರಾಮೀಣಗಳ ವೈಭವ ಹಾಗೂ ಸೊಗುಡುಗಳನ್ನು ಎತ್ತಿ ಹಿಡಿಯುವಂತ ಕಲೆಯಾಗಿರುವ ರಂಗೋಲಿಯ ಮೂಲಕ ವ್ಯಕ್ತಪಡಿಸಿದ ಅವರ ಪ್ರೀತಿ ನಿಜಕ್ಕೂ ಬೆಲೆ ಕಟ್ಟಲಾರದಂತದ್ದು, ನಯ ವಿನಯ ಪ್ರೀತಿ ವಿಶ್ವಾಸಗಳ ಮೂಲಕ ನನ್ನ ಶಕ್ತಿಯನ್ನು ಹೆಚ್ಚಿಸಿದ ಸಮಸ್ತ ಗ್ರಾಮಗಳ ಜನತೆಗೆ ನನ್ನ ಹೃದಯಸ್ಪರ್ಶಿ ಧನ್ಯವಾದಗಳನ್ನು” ತಿಳಿಸಿದರು.

Comments